ಆಟವಾಡುತ್ತಾ ಹೋದ ಬಾಲಕ ಮರಳಿ ಬರಲಿಲ್ಲ: ಬಾಲಕನನ್ನು ಬಲಿಪಡೆದ ನೀರಿನ ತೊಟ್ಟಿ
ದಾವಣಗೆರೆ: ನೀರಿನ ತೊಟ್ಟಿಗೆ ಬಿದ್ದು, ಬಾಲಕನೋರ್ವ ಮೃತಪಟ್ಟ ಘಟನೆ ನಗರದ ಸರಸ್ವತಿಪುರದಲ್ಲಿ ನಡೆದಿದ್ದು, ನಿನ್ನೆ ಬೆಳಗ್ಗೆಯಿಂದ ಬಾಲಕ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ.
ರಾತ್ರಿ ವೇಳೆ ಮನೆಯ ಪಕ್ಕದಲ್ಲೇ ಇದ್ದ ನಿರ್ಮಾಣ ಹಂತದ ಕಟ್ಟದಲ್ಲಿ ಪರಿಶೀಲಿಸಿದಾಗ ಮಗುವಿನ ಮೃತದೇಹ ತೊಟ್ಟಿಯಲ್ಲಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
6 ವರ್ಷ ವಯಸ್ಸಿನ ಮೋಹಿತ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಆಟವಾಡುತ್ತಾ ಹೋದ ಬಾಲಕ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಘಟನೆ ಸ್ಥಳಕ್ಕೆ ಕೆಟಿಜೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ನೀರಿ ಪರಿಶೀಲನೆ ನಡೆದಿದ್ದಾರೆ.
ಇನ್ನೂ ಕಟ್ಟಡ ಮಾಲಿಕನ ವಿರುದ್ಧ ಮೃತ ಬಾಲಕನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ. ನಿರ್ಮಾಣ ಹಂತದ ಕಟ್ಟಡಗಳ ಬಳಿಯಲ್ಲಿ ಇರುವ ಮನೆಯವರು ತಮ್ಮ ಪುಟ್ಟ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳು ನಿರ್ಮಾಣ ಹಂತದ ಕಟ್ಟಡಗಳ ತೊಟ್ಟಿಯಲ್ಲಿ ಬಿದ್ದು, ಮೃತಪಡುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ, ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ನೆಲ್ಯಾಡಿ: ಮನೆಯ ಕೋಣೆಯಲ್ಲಿಯೇ ನೇಣಿಗೆ ಶರಣಾದ ಮಹಿಳೆ
ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಂಕಷ್ಟ ಸಿಲುಕಿದ ಸಿಎಂ ಬಸವರಾಜ್ ಬೊಮ್ಮಾಯಿ
ರಾಜ್ಯದಲ್ಲಿ ಅ.25ರಿಂದ 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭ
ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:
ಮಧ್ಯಪ್ರದೇಶ: 12 ಲಕ್ಷ ಎತ್ತುಗಳ ‘ವೃಷಣ ಬೀಜ’ ಒಡೆಯುವ ಯೋಜನೆಗೆ ಬಿಜೆಪಿ ಸಂಸದೆಯಿಂದಲೇ ವಿರೋಧ