ಆಟವಾಡುತ್ತಾ ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವು - Mahanayaka
8:06 PM Wednesday 11 - December 2024

ಆಟವಾಡುತ್ತಾ ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವು

koppala
03/07/2021

ಕೊಪ್ಪಳ:  ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ  ಕೊಪ್ಪಳದ ಕನಕಗಿರಿ ತಾಲೂಕಿನ ವಡನಖೇರ ಗ್ರಾಮದಲ್ಲಿ ನಡೆದಿದೆ.

11 ವರ್ಷ ವಯಸ್ಸಿನ ಕವಿಕಾ ಹಾಗೂ 9 ವರ್ಷ ವಯಸ್ಸಿನ ಸಂಜನಾ ಮೃತ ಬಾಲಕಿಯರಾಗಿದ್ದು, ಪೋಷಕರನ್ನು ನೋಡಲು ಗ್ರಾಮಕ್ಕೆ ನಿನ್ನೆಯಷ್ಟೇ ಬಂದಿದ್ದರು ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಆಟವಾಡುತ್ತಾ ಇದ್ದ ಬಾಲಕಿಯರು ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕನಕಗಿರಿ ಪೊಲೀಸ್  ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ