ಅಂಗಳದಲ್ಲಿ ಆಟವಾಡುತ್ತಾ ಊಟ ಮಾಡುತ್ತಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನ ಕಾಯಿ | ಮಗು ಸಾವು - Mahanayaka
6:43 AM Thursday 18 - September 2025

ಅಂಗಳದಲ್ಲಿ ಆಟವಾಡುತ್ತಾ ಊಟ ಮಾಡುತ್ತಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನ ಕಾಯಿ | ಮಗು ಸಾವು

haveri
29/06/2021

ಹಾವೇರಿ:  ಮಗುವಿಗೆ ಊಟ ಮಾಡಿಸುತ್ತಿದ್ದ ವೇಳೆ ತೆಂಗಿನ ಕಾಯಿ  ತಲೆಯ ಮೇಲೆ ಬಿದ್ದು 11 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ  ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ.


Provided by

ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಗಳ ಮಗು ಮೃತಪಟ್ಟ ಮಗುವಾಗಿದ್ದು, ನಿನ್ನೆ ಬೆಳಗ್ಗೆ ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನೆ ನಡೆದ ತಕ್ಷಣವೇ ಮಗುವನ್ನು  ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಿನ್ನೆ ರಾತ್ರಿ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ವರದಿಯಾಗಿದ್ದು, ಮಗುವನ್ನು ಕಳೆದುಕೊಂಡಿರುವ ಪೋಷಕರ ರೋದನೆ ಮುಗಿಲು ಮುಟ್ಟಿದೆ.

ಇತ್ತೀಚಿನ ಸುದ್ದಿ