ಆಟವಾಡುತ್ತಿದ್ದ ವೇಳೆ ಗಣೇಶನ ಮೂರ್ತಿಯನ್ನು ನುಂಗಿದ ಬಾಲಕ !
ಬೆಂಗಳೂರು: ಮೂರು ವರ್ಷ ವಯಸ್ಸಿನ ಬಾಲಕನೋರ್ವ ಗಣೇಶನ ಮೂರ್ತಿಯನ್ನು ನುಂಗಿರುವ ಘಟನೆ ಶುಕ್ರವಾರ ನಡೆದಿದ್ದು, ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇದೀಗ ಶಸ್ತ್ರ ಚಿಕಿತ್ಸೆಯ ಮೂಲಕ ಗಣೇಶನ ಮೂರ್ತಿಯನ್ನು ಹೊರ ತೆಗೆಯಲಾಗಿದೆ.
ಬಾಲಕನಿಗೆ ಉಗುಳು ನುಂಗಲು ಕೂಡ ಕಷ್ಟಕರವಾದ ಸ್ಥಿತಿಯಾದಾಗ ಪೋಷಕರು ಆತಂಕಗೊಂಡು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಬಾಲಕನ ಎಕ್ಸ್ ರೇ ತೆಗೆದಾಗ ಎದೆಯ ಭಾಗದಲ್ಲಿ ಗಣೇಶನ ಮೂರ್ತಿ ಇರುವುದು ಪತ್ತೆಯಾಗಿದೆ.
ತಕ್ಷಣವೇ ವೈದ್ಯರು ಶಸ್ತ್ರ ಚಿಕಿತ್ಸೆ ಆರಂಭಿಸಿದ್ದು, 1 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯ ಬಳಿಕ ಬಾಲಕನ ಎದೆಯಲ್ಲಿದ್ದ 5 ಸೆಂಟಿ ಮೀಟರ್ ಉದ್ದದ ಗಣೇಶನ ಮೂರ್ತಿಯನ್ನು ಹೊರ ತೆಗೆದಿದ್ದು, ಬಳಿಕ ಮೂರು ಗಂಟೆಗಳ ಸಮಯ ಬಾಲಕನ ಮೇಲೆ ನಿಗಾ ಇಟ್ಟು ಬಳಿಕ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇನ್ನಷ್ಟು ಸುದ್ದಿಗಳು…
ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ
ಪತ್ನಿಯ ವೇಷದಲ್ಲಿ ವಿಮಾನ ಏರಿದ ಪತಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?
ತಾಯಿಯ ಕಣ್ಣೆದುರೇ ಬಾಲಕಿ ನೀರಿನಲ್ಲಿ ಕೊಚ್ಚಿ ಹೋದಳು!
ಗಂಡನ ಅಶ್ಲೀಲ ವಿಡಿಯೋ ದಂಧೆಯ ಬಗ್ಗೆ ಶಿಲ್ಪಾ ಶೆಟ್ಟಿಯ ಮೊದಲ ಪ್ರತಿಕ್ರಿಯೆ ಏನು ಗೊತ್ತಾ?