ಅತಿಥಿ ಶಿಕ್ಷಕಿಯ ಮೃತದೇಹ ಮಠದ ಬಾವಿಯಲ್ಲಿ ಪತ್ತೆ - Mahanayaka
8:19 PM Wednesday 11 - December 2024

ಅತಿಥಿ ಶಿಕ್ಷಕಿಯ ಮೃತದೇಹ ಮಠದ ಬಾವಿಯಲ್ಲಿ ಪತ್ತೆ

death
26/03/2022

ಚಿತ್ತಾಪುರ: ಅತಿಥಿ ಶಿಕ್ಷಕಿಯೊಬ್ಬರು ತಾಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿರುವ ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ.

ಭೂಮಿಕಾ ಶರಣಪ್ಪ ಊಡಗಿ( 26) ಮೃತ ಅತಿಥಿ ಶಿಕ್ಷಕಿ. ಇವರು ದಿಗ್ಗಾಂವ ಗ್ರಾಮದ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯಾಗಿದ್ದು, ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರ ಆಪ್ತಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶರಣಪ್ಪ ಊಡಗಿ ಎಂಬವರ ಪತ್ನಿ ಎಂದು ತಿಳಿದು ಬಂದಿದೆ.

ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಹೋದ ಭೂಮಿಕಾ ವಾಪಾಸ್‌ ಮನೆಗೂ ಬಾರದೆ, ಅತ್ತ ಶಾಲೆಗೂ ಹೋಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯ ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ, ಮಠದ ಹತ್ತಿರ ಹೋಗಿರುವ ವಿಷಯ ತಿಳಿದು ಬಂದಿದೆ.

ಮಠದ ಆವರಣದಲ್ಲಿರುವ ಬಾವಿಯಲ್ಲಿ ಅವರ ಚಪ್ಪಲಿಗಳು ಪತ್ತೆಯಾಗಿದೆ. ಅಲ್ಲದೆ, ಬಾವಿಗೆ ಅಳವಡಿಸಿದ್ದ ತಂತಿ ಜಾಳಿಗೆ ಕುಡ ತೆರೆದುಕೊಂಡಿತ್ತು. ಇದರಿಂದ ಅನುಮಾನಗೊಂಡು ಹುಡುಕಾಡಿದಾಗ, ಭೂಮಿಕಾ ಅವರ ಶವ ಪತ್ತೆಯಾಯಿತು ಎಂದು ಚಿತ್ತಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ಸಂಬಂಧ ಚಿತ್ತಾಪುರ ಪೊಲೀಸ್‌ ಠಾಣೆಯಲ್ಲಿ ಅತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಾವಗಡ ಬಸ್ ಅಪಘಾತ ಪ್ರಕರಣ: 7ಕ್ಕೆ ಏರಿಕೆಯಾದ ಮೃತರ ಸಂಖ್ಯೆ

ಮಗುವಿನ ಗ್ರಹಗತಿ ಸರಿಯಿಲ್ಲ ಎಂದು ಜಲಾಶಯಕ್ಕೆ ಎಸೆದುಕೊಂದ ಪಾಪಿ ತಾಯಿ!

ನನ್ನನ್ನು ಜೈಲ್‌ಗೆ ಕಳುಹಿಸಲು ಬಿಜೆಪಿ ಕೆಟ್ಟದಾರಿ ಹಿಡಿಯುತ್ತಿದೆ: ಉದ್ಧವ್ ಠಾಕ್ರೆ

ಚಾಮುಂಡಿ ಬೆಟ್ಟದಲ್ಲೂ ಮುಸ್ಲಿಂ ವ್ಯಾಪಾರಿಗಳ ಅಂಗಡಿ ತೆರವಿಗೆ ವಿಹೆಚ್‌ಪಿ ಒತ್ತಾಯ

ಇತ್ತೀಚಿನ ಸುದ್ದಿ