ಆತ್ಮಹತ್ಯೆ ಮಾಡಲು ಯುವತಿ  ಟ್ಯಾಂಕ್ ಮೇಲೆ  ಏರಿದಳು | ಆಕೆಯನ್ನು ರಕ್ಷಿಸಲು ಇನ್ನೋರ್ವ ಟ್ಯಾಂಕ್ ಹತ್ತಿದ್ದ | ಆ ಬಳಿಕ ನಡೆದದ್ದೇನು?

26/02/2021

ಲಕ್ನೋ: ತನ್ನ ಪ್ರಿಯಕರನೊಂದಿಗೆ ಜಗಳ ಮಾಡಿದ್ದ ಯುವತಿ ಮನೆಯ ಸಮೀಪದ ವಾಟರ್ ಟ್ಯಾಂಕ್ ಮೇಲೇರಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ  ಉತ್ತರ ಪ್ರದೇಶದ ಮುಜಫರ್ ನಗರದ ಮಂಡಿ ಕೋತ್ವಾಲಿ ಕ್ಷೇತ್ರದ ಗಾಂಧಿ ನಗರದಲ್ಲಿ ನಡೆದಿದೆ.

ತನ್ನ ಪ್ರಿಯಕರನೊಂದಿಗೆ ಜಗಳವಾಡಿದ ಯುವತಿ ಮನೆಯ ಸಮೀಪದ ವಾಟರ್ ಟ್ಯಾಂಕ್ ಏರಿದ್ದಳು. ಇದರಿಂದ ಆತಂಕಕ್ಕೊಳಗಾದ ಪೋಷಕರು ಹಾಗೂ ಕುಟುಂಸ್ಥರು ಕೆಳಗೆ ಇಳಿಯುವಂತೆ ಯುವತಿಯನ್ನು ಪರಿಪರಿಯಾಗಿ ಕೇಳಿಕೊಂಡರೂ ಆಕೆ ಇಳಿಯಲಿಲ್ಲ.

ತಾನು ಸಾಯುತ್ತೇನೆ ಎಂದು ಯುವತಿ ಜೋರಾಗಿ ಬೊಬ್ಬೆ ಹೊಡೆದು ಹೇಳಿದ್ದಾಳೆ. ಈ ವೇಳೆ ವ್ಯಕ್ತಿಯೋರ್ವ ಯುವತಿಯನ್ನು ರಕ್ಷಿಸಲು ಟ್ಯಾಂಕ್ ನ ಹಿಂದಿನಿಂದ  ಮೆಟ್ಟಿಲು ಹತ್ತಲು ಯತ್ನಿಸಿದ್ದಾನೆ.

ವ್ಯಕ್ತಿ ಬರುವುದನ್ನು ಗಮನಿಸಿದ ಯುವತಿ ವಾಟರ್ ಟ್ಯಾಂಕ್ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಟ್ಯಾಂಕ್ ನಿಂದ ಕೆಳಗೆ ಬಿದ್ದ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವಿಗೀಡಾಗಿದ್ದಾಳೆ.

ಇತ್ತೀಚಿನ ಸುದ್ದಿ

Exit mobile version