“ಕೆಲಸ ಮುಗಿಯಿತು ವಾಪಸ್ ಬಾ” ಎಂದು ಕನಸಿನಲ್ಲಿ ಕರೆದ ಗುರು | ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ - Mahanayaka
9:18 AM Tuesday 24 - December 2024

 “ಕೆಲಸ ಮುಗಿಯಿತು ವಾಪಸ್ ಬಾ” ಎಂದು ಕನಸಿನಲ್ಲಿ ಕರೆದ ಗುರು | ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ

jaina
20/05/2021

ಮುಂಬೈ: ಜೈನ ದೇವಾಲಯದಲ್ಲಿ 71 ವರ್ಷ ವಯಸ್ಸಿನ ಜೈನ ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಸಾವಿಗೂ ಮುನ್ನ ಸ್ವಾಮೀಜಿ ಡೆತ್ ನೋಟ್ ಬರೆದಿಟ್ಟಿದ್ದಾರೆ.

ಮನೋಹರ್ ಲಾಲ್ ಮುನಿ ಮಹಾರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಸ್ವಾಮೀಜಿಯಾಗಿದ್ದು, ಬುಧವಾರ ರಾತ್ರಿ ಮುಂಬೈನ ಘಾಟ್ ಕೋಪರ್ ಪ್ರದೇಶದ ಜೈನ ದೇವಾಲಯದಲ್ಲಿ ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕನಸಿನಲ್ಲಿ ನನ್ನ ಗುರು ಬಂದಿದ್ದರು. ಈ ಭೂಮಿಯ ಮೇಲೆ ನಿನ್ನ ಕೆಲಸ ಮುಗಿದಿದೆ ವಾಪಸ್ ಬಾ ಎಂದು ಕರೆದರು ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಲಾಕ್ ಮುನಿ ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಇನ್ನೂ ಡೆತ್ ನೋಟ್ ವಶಪಡಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಮೃತದೇಹವನ್ನು  ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇತ್ತೀಚಿನ ಸುದ್ದಿ