ಆತ್ಮಹತ್ಯೆಯ ಕೊನೆಯ ಕ್ಷಣದಲ್ಲಿ ಯುವತಿಯನ್ನು ರಕ್ಷಿಸಿದ ಪೊಲೀಸ್ | ವಿಡಿಯೋ ವೈರಲ್
ನವದೆಹಲಿ: ಯುವತಿಯೋರ್ವಳು ಆತ್ಮಹತ್ಯೆ ನಡೆಸಲು ಮೆಟ್ರೋ ಸ್ಟೇಷನ್ ಸೆಕ್ಟರ್ 28ರ ಗೋಡೆಯ ಮೇಲೆ ಹತ್ತಿದ್ದು, ಈ ವೇಳೆ ಪೊಲೀಸ್ ಕಾನ್ಸ್ ಟೇಬಲ್ ವೋರ್ವರು ಯುವತಿಗೆ ತಿಳಿಯದ ಹಾಗೆ ಏಕಾಏಕಿ ಗೋಡೆಯ ಬದಿಯಿಂದ ಹೋಗಿ ಆಕೆಯನ್ನು ಹಿಡಿದು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೆಹಲಿಗೆ ಸಮೀಪದ ಫರಿದಾಬಾದ್ ನಲ್ಲಿರುವ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ನಡೆದಿದೆ. ಯುವತಿಯೋರ್ವಳು ಸೆಕ್ಟರ್ 28 ಗೋಡೆಯ ಮೇಲೆ ಕುಳಿತು ಆತ್ಮಹತ್ಯೆ ನಡೆಸಲು ಮುಂದಾಗಿದ್ದಾಳೆ. ಈ ವೇಳೆ ಆಕೆಯನ್ನು ಹಲವರು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.
ಗೋಡೆಯ ಮೇಲೆ ಕುಳಿತು ಕೆಳಗೆ ಹಾರಲು ಯುವತಿ ಧೈರ್ಯ ತಂದುಕೊಳ್ಳುತ್ತಿದ್ದಳು. ಈ ವೇಳೆ ಕಾನ್ ಸ್ಟೆಬಲ್ ಸರ್ಫ್ ರಾಜ್ ಅವರು ಮೆಲ್ಲಗೆ ಯುವತಿಯ ಬಳಿಗೆ ನಡೆದುಕೊಂಡು ಹೋಗಿದ್ದು, ಯುವತಿಗೆ ತಿಳಿಯುವ ಮೊದಲೇ ಆಕೆಯನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ಇನ್ನೊಬ್ಬರು ಸಿಬ್ಬಂದಿ ಅವರಿಗೆ ನೆರವಾಗಿದ್ದಾರೆ.
ಸರ್ಫ್ ರಾಜ್ ಅವರು ಸ್ವಲ್ಪ ತಡ ಮಾಡುತ್ತಿದ್ದರೂ ಯುವತಿ ಕೆಳಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಳು. ಆಕೆ ಹಾರಲು ಸಿದ್ಧವಾಗುತ್ತಿದ್ದಂತೆಯೇ ಸರ್ಫ್ ರಾಜ್ ಅವರು ತಕ್ಷಣವೇ ಆಕೆಯನ್ನು ಹಿಡಿದುಕೊಂಡಿದ್ದಾರೆ. ಆಕೆ ಈ ವೇಳೆ ಒದ್ದಾಡಿದ್ದಾಳೆ. ಈ ವೇಳೆ ಸ್ವತಃ ರಕ್ಷಿಸಲು ಹೋದವರೇ ಅಪಾಯಕ್ಕೀಡಾಗುವ ಸಾಧ್ಯತೆ ಇತ್ತು. ತಕ್ಷಣವೇ ಸಮೀಪದಲ್ಲಿದ್ದವರು ಸಹಾಯ ಮಾಡುವ ಮೂಲಕ ಆಕೆಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.
@FBDPolice @cmohry
फरीदाबाद पुलिस के सबइंस्पेक्टर धनप्रकाश और कॉन्स्टेबल सरफराज की बहादुरी,खुदकुशी के आमादा एक लड़को को मेट्रो स्टेशन पर कुछ इस तरह बचाया,लड़की काम को लेकर डिप्रेशन में थी pic.twitter.com/yEN5WJnA59— Mukesh singh sengar मुकेश सिंह सेंगर (@mukeshmukeshs) July 25, 2021
ಇನ್ನಷ್ಟು ಸುದ್ದಿಗಳು…
ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್
ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಳು: 9 ಮಂದಿ ಸಾವು | ಭಯಾನಕ ವಿಡಿಯೋ ವೈರಲ್
ಸಂಜೆಯ ಸಂದೇಶ ಬರಲಿಲ್ಲ! | ಆಟ ಇನ್ನೂ ಮುಗಿದಿಲ್ಲ, ನಾಳೆಗೆ ಶಿಫ್ಟ್ ಆಗುತ್ತಾ ಸಿಎಂ ಬದಲಾವಣೆ ಹೈಡ್ರಾಮಾ?
ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ
ಕೇರಳದಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಮಳೆ: ಅಲ್ಪ ಸಮಯದಲ್ಲಿ ತೀವ್ರ ಹಾನಿ ಮಾಡುತ್ತಿದೆ ಸುಳಿಗಾಳಿ ಸಹಿತ ಮಳೆ
ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಥಳಿಸಿ, ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ!