ಕೈಕಾಲು ಕಟ್ಟಿಹಾಕಿ ಅತ್ಯಾಚಾರ ಮಾಡಿದ ಸ್ಥಿತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹ ಪತ್ತೆ - Mahanayaka

ಕೈಕಾಲು ಕಟ್ಟಿಹಾಕಿ ಅತ್ಯಾಚಾರ ಮಾಡಿದ ಸ್ಥಿತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹ ಪತ್ತೆ

14/01/2021

ಜಾರ್ಖಂಡ್: ಕೈಕಾಲು ಕಟ್ಟಿ ಹಾಕಿ ಅತ್ಯಾಚಾರ ನಡೆಸಿದ ಸ್ಥಿತಿಯಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದ್ದು, ಇಲ್ಲಿನ ರಾಮಘಡ ಜಿಲ್ಲೆಯ ಪತ್ರಾತು ಅಣೆಕಟ್ಟೆ ನೀರಿನಲ್ಲಿ ಮೃತದೇಹ ಪತ್ತೆಯಾಗಿದೆ.

 

ಗೊಡ್ಡಾ ಜಿಲ್ಲೆಯವರಾದ ವಿದ್ಯಾರ್ಥಿನಿ ಇಲ್ಲಿನ ಹಜಾರಿಬಾಗ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಯುವತಿಯ ಮೃತದೇಹವನ್ನು ನೋಡಿದ ದಾರಿಹೋಕರು ಪೊಲಿಸರಿಗೆ ವಿಚಾರ ತಿಳಿಸಿದ್ದಾರೆ.

 

ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ಪ್ರದೇಶದ ಅಣೆಕಟ್ಟು ಪಿಕ್ ನಿಕ್ ತಾಣವಾಗಿದ್ದು, ಈಕೆ ತನ್ನ ಸ್ನೇಹಿತರ ಜೊತೆಗೆ ಇಲ್ಲಿಗೆ ಬಂದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

 

ರಾಮಘಡ ಹಾಗೂ ಹಜಾರಿಬಾಗ್ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದ್ದು, ಸಂಭವನೀಯ ಅತ್ಯಾಚಾರ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿರುವುದಾಗಿ ಡಿಐಜಿ .ವಿ ಓಂಕಾರ್ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ