ರಮೇಶ್ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆನ್ನುವುದಕ್ಕೆ ಸಾಕ್ಷಿ ಇಲ್ಲ:  ಎಸ್ ಐಟಿಯಿಂದ ‘ಬಿ’ ರಿಪೋರ್ಟ್ - Mahanayaka
10:01 AM Friday 20 - September 2024

ರಮೇಶ್ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆನ್ನುವುದಕ್ಕೆ ಸಾಕ್ಷಿ ಇಲ್ಲ:  ಎಸ್ ಐಟಿಯಿಂದ ‘ಬಿ’ ರಿಪೋರ್ಟ್

ramesh jarakiholi
04/02/2022

ಬೆಂಗಳೂರು:  ಅತ್ಯಾಚಾರದ ಆರೋಪ ಹೊತ್ತಿದ್ದ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ದೊರೆತಿದ್ದು,  ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ಕೋರ್ಟ್ ಗೆ ಬಿ ರಿಪೋರ್ಟ್ ಪ್ರತಿ ಸಲ್ಲಿಸಿದೆ.

ರಮೇಶ್ ಜಾರಕಿಹೊಳಿಗೆ ಎಸ್ ಐಟಿ ಕ್ಲೀನ್ ಚಿಟ್ ಕೊಟ್ಟಿದ್ದು, ಯುವತಿಯ ದೂರಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಲಾಗಿದೆ ಎಂದು ವರದಿಯಾಗಿದೆ.

ಬಿ ರಿಪೋರ್ಟ್ ಹಿನ್ನೆಲೆಯಲ್ಲಿ ದೂರುದಾರ ಯುವತಿಗೆ ಪೊಲೀಸರು ನೋಟಿಸ್ ನೀಡಿದ್ದು, ನಿಮ್ಮ ಪ್ರಕರಣ ಮುಕ್ತಾಯವಾಗಿದೆ. ತನಿಖೆ ಮುಕ್ತಾಯಗೊಂಡಿದೆ. 1ನೇ ಎಸಿಎಂಎಂ ಕೋರ್ಟ್ ಗೆ  ಸಲ್ಲಿಕೆ ಮಾಡಲಾಗಿದೆ ಎಂದು ನೋಟಿಸ್ ನೀಡಿದೆ.


Provided by

ಸಾಕ್ಷ್ಯಾಧಾರಗಳಿಲ್ಲ!

ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಾಧಾರ ಇಲ್ಲ. ಜೊತೆಗೆ ಟೆಕ್ನಿಕಲ್ ಎವಿಡೆನ್ಸ್ ಕೂಡ ಇಲ್ಲ. ಇಬ್ಬರು ಕೂಡ ಸಾಕಷ್ಟು ದಿನಗಳಿಂದ ಪರಿಚಯ ಇಟ್ಟುಕೊಂಡಿದ್ದರು. ಇಬ್ಬರು ಸಮ್ಮತಿಯಿಂದ ಸಂಪರ್ಕ ಹೊಂದಿದ್ದರು. ಯಾವುದೇ ಬಲಾತ್ಕಾರ ನಡೆದಿಲ್ಲ. ದೂರವಾಣಿ ಕರೆಯಲ್ಲಿಯೂ ತುಂಬಾ ಸಲಿಗೆಯಿಂದ ಮಾತನಾಡಿದ್ದಾರೆ. ಲೈಂಗಿಕ ಪ್ರಚೋದನೆಯ ಮಾತುಗಳು ಕೂಡ ಇವೆ. ಒಬ್ಬರು ಇನ್ನೊಬ್ಬರ ಮೇಲೆ ಒತ್ತಡ ಹೇರಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಎಸ್ ಐಟಿ ಬಿ ರಿಪೋರ್ಟ್ ನಲ್ಲಿ ಹೇಳಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಎಸ್‌ ಪಿಯ ಮೊದಲ ಮಹಿಳಾ ರಾಷ್ಟ್ರೀಯ ವಕ್ತಾರರಾಗಿ ನಿರ್ಭಯ ಪ್ರಕರಣದ ವಕೀಲೆ ಸೀಮಾ ಕುಶ್ವಾಹಾ ನೇಮಕ

ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಪಿ ಎಸ್ ಐ ಖಡಕ್‌ ಎಚ್ಚರಿಕೆ

ಗರ್ಭಿಣಿಯನ್ನು ಬೈಕ್ ​​ನಲ್ಲಿ ​​ ಕರೆತಂದ ಪತಿ: ಆಸ್ಪತ್ರೆ ಮುಂಭಾಗದಲ್ಲೇ ಹೆರಿಗೆ

ಸೇನಾ ಸಮವಸ್ತ್ರ ಧರಿಸುವುದು ಶಿಕ್ಷಾರ್ಹ ಅಪರಾಧ: ಪ್ರಧಾನಿ ಮೋದಿಗೆ ಕೋರ್ಟ್ ನೋಟಿಸ್

ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ಸ್ವಜಾತಿಯವರಿಂದಲೇ ಯುವಕನ ಕುಟುಂಬಕ್ಕೆ ಬಹಿಷ್ಕಾರ

ಇತ್ತೀಚಿನ ಸುದ್ದಿ