ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಬಿಜೆಪಿಯ ಮಾಜಿ ಸಂಸದ ಚಿನ್ಮಯಾನಂದ ಖುಲಾಸೆ

chinmayananda
27/03/2021

ನವದೆಹಲಿ: ಉತ್ತರಪ್ರದೇಶ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ತನ್ನ ಆರೋಪವನ್ನು ಹಿಂಪಡೆದಿರುವುದು ಹಾಗೂ ಸಾಕ್ಷಿಗಳ ಕೊರತೆಯಿಂದ ಬಿಜೆಪಿಯ ಮಾಜಿ ಸಂಸದ ಚಿನ್ಮಯಾನಂದ ಅವರನ್ನು ಲಕ್ನೋದ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

ಸ್ವಾಮಿ ಚಿನ್ಮಯಾನಂದ ಅವರನ್ನು ಎಲ್ಲಾ ಆರೋಪಗಳಿಂದ ನ್ಯಾಯಾಲಯವು ಮುಕ್ತಗೊಳಿಸಿದ್ದು, ಇದರ ಜೊತೆಗೆ ಚಿನ್ಮಯಾನಂದ ಅವರಿಂದ 5 ಕೋಟಿ ರೂ. ವಸೂಲಿಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ವಿದ್ಯಾರ್ಥಿನಿ ಹಾಗೂ ಆಕೆಯ ಸಹೋದ್ಯೋಗಿಯನ್ನೂ ಖುಲಾಸೆಗೊಳಿಸಲಾಗಿದೆ ಎಂದು ಚಿನ್ಮಯಾನಂದ ಪರ ವಕೀಲ ಓಂ ಸಿಂಗ್ ಹೇಳಿದ್ದಾರೆ.

2019ರಲ್ಲಿ ಚಿನ್ಮಯಾನಂದ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿ ವಿಡಿಯೋ ಬಿಡುಗಡೆ ಮಾಡಿದ್ದಳು. ಬಳಿಕ ಯುವತಿ ನಾಪತ್ತೆಯಾಗಿದ್ದಳು. ಯುವತಿಯ ತಂದೆ ನೀಡಿದ ದೂರಿನಲ್ಲಿ ಚಿನ್ಮಯಾನಂದ ಹೆಸರು ಉಲ್ಲೇಖಿಸಿದ್ದರು.  ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣ ಚಿನ್ಮಯಾನಂದ ವಿರುದ್ಧ ದಾಖಲಾಗಿ್ತ್ತು. ಅಲಹಾಬಾದ್ ಹೈಕೋರ್ಟ್ ಚಿನ್ಮಯಾನಂದಗೆ ಜಾಮೀನು ನೀಡಿತ್ತು.  2020ರ ಫೆ.5ರಂದು ಚಿನ್ಮಯಾನಂದ ಉತ್ತರ ಪ್ರದೇಶ ಶಹಜಹಾನ್ಪುರ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಆರೋಪ ಮುಕ್ತರಾಗಿದ್ದಾರೆ.

ಕೊನೆಗೂ ಗಬ್ಬೆದ್ದಿತು ಶಾಸಕ, ಸಚಿವರ ಅನೈತಿಕ ಸಂಬಂಧ!

ಇತ್ತೀಚಿನ ಸುದ್ದಿ

Exit mobile version