ಅತ್ಯಾಚಾರಕ್ಕೊಳಗಾದ ಯುವತಿಗೆ 50 ಸಾವಿರ ರೂ. ನೀಡಿ ಪ್ರಕರಣ ಮುಕ್ತಾಗೊಳಿಸಲು ಹೇಳಿದ ಪಂಚಾಯತ್!
ಗೋರಖ್‌ಪುರ: ಆರೋಪಿಯಿಂದ 50 ಸಾವಿರ ರೂಪಾಯಿ ತೆಗೆದುಕೊಂಡು ಆತನಿಗೆ ಬೂಟಿನಿಂದ ಐದು ಬಾರಿ ಹೊಡೆದು ಅತ್ಯಾಚಾರ ಪ್ರಕರಣವನ್ನು ಮುಕ್ತಾಯಗೊಳಿಸಿ ಎಂದು ಅತ್ಯಾಚಾರ ಸಂತ್ರಸ್ತೆಗೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ನೀಡಿದ ಸಲಹೆ ನೀಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಅತ್ಯಾಚಾರ ನಡೆದ ಬಗ್ಗೆ ಸಂತ್ರಸ್ಥೆಯ ತಾಯಿಯು ಗ್ರಾಮ ಪಂಚಾಯಿತಿಗೆ ಜೂನ್ 23ರಂದು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಂಚಾಯಿತಿಯು ಆರೋಪಿಯಿಂದ ಹಣ ಪಡೆದು ಅಧಿಕಾರಿಗಳ ಎದುರಿನಲ್ಲೇ ಬೂಟಿನಿಂದ ಹೊಡೆದು ಪ್ರಕರಣ ಮುಕ್ತಾಯಗೊಳಿಸುವಂತೆ ಹೇಳಿತ್ತು ಎಂದು ಹೇಳಲಾಗಿದೆ. ಪಂಚಾಯತ್ ನ ಈ ಸಲಹೆಗೆ ಒಪ್ಪದ ಸಂತ್ರಸ್ತೆಯ ಕುಟುಂಬ ಮಹಾರಾಜ್‌ಗಂಜ್ ಜಿಲ್ಲೆಯ ಕೋತಿಭರ್ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೂ ದೂರು ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆ ಸೂಚಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಸಾಬೀತಾದರೆ, ಮುಂದಿನ ಕ್ರಮಗಳನ್ನು ತಕ್ಷಣದಲ್ಲಿಯೇ ಕೈಗೊಳ್ಳಲಾಗುವುದು ಎಂದು ಮಹಾರಾಜ್ ಗಂಜ್ ಎಸ್ ಪಿ ಪ್ರದೀಪ್ ಗುಪ್ತಾ ಸೂಚಿಸಿದ್ದಾರೆ.