ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು! - Mahanayaka
1:06 PM Thursday 12 - December 2024

ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!

uttar pradesh news
11/06/2021

ಅಲಿಗಢ: ಜಾನುವಾರುಗಳಿಗೆ ಮೇವು ತರಲು ಜಮೀನಿಗೆ ಹೋಗಿದ್ದ ಬಾಲಕಿಯನ್ನು ದುಷ್ಕರ್ಮಿಯೋರ್ವ ಅತ್ಯಾಚಾರ ನಡೆಸಿದ್ದು, ಇದರಿಂದ ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶ ಹರ್ದುಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ಗಣೇಶ್ ಎಂಬ ಆರೋಪಿ ಮೇವು ತರಲು ಹೋಗುತ್ತಿದ್ದ  ಬಾಲಕಿಯನ್ನು ಜೋಳದ ತೋಟಕ್ಕೆ ಬಲವಂತವಾಗಿ ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಇದಾದ ಬಳಿಕ ಮನೆಗೆ ಬಂದ ಬಾಲಕಿ ಮನೆಯಲ್ಲಿ ಮೌನವಾಗಿದ್ದಳು. ಊಟ ಮಾಡಲು ಕೂಡ ನಿರಾಕರಿಸಿದ್ದಳು.

ಬಾಲಕಿಯ ವರ್ತನೆ ನೋಡಿ ಆತಂಕಕ್ಕೀಡಾದ ಮನೆಯವರು ಆಕೆಯನ್ನು ವಿಚಾರಿಸಿದಾಗ ನಡೆದ ವಿಚಾರವನ್ನು ಆಕೆ ತಿಳಿಸಿದ್ದಾಳೆ. ಆ ಬಳಿಕ ತನ್ನ ಮಲಗುವ ಕೋಣೆಗೆ ಆಕೆ ತೆರಳಿದ್ದಾಳೆ. ಅಲ್ಲಿ ತನ್ನ ಸ್ಕಾರ್ಫ್ ನಿಂದ  ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಈ ಸಂಬಂಧ  ಬಾಲಕಿಯ ಸಹೋದರ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376  ಮತ್ತು 306ರ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಇನಷ್ಟು ಚುರುಕುಗೊಳಿಸಿದ್ದಾರೆ.

ಇತ್ತೀಚಿನ ಸುದ್ದಿ