ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆ: ಓರ್ವ ಸಾವು, ಮತ್ತೊಬ್ಬ ಗಂಭೀರ - Mahanayaka

ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆ: ಓರ್ವ ಸಾವು, ಮತ್ತೊಬ್ಬ ಗಂಭೀರ

bidar sbi
16/01/2025

ಬೀದರ್: ಹಾಡಹಗಲೇ ಬೀದರ್ ನಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆ ನಡೆದಿದ್ದು, ಎಸ್ ಬಿಐ ಬ್ಯಾಂಕ್ ನ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡಿನ ದಾಳಿ ನಡೆಸಿ ಹಣದೊಂದಿಗೆ ದರೋಡೆ ಕೋರರು ಪರಾರಿಯಾಗಿದ್ದಾರೆ.


Provided by

ದರೋಡೆಕೋರರು ನಡೆಸಿದ ಗುಂಡಿನ ದಾಳಿಯ ಪರಿಣಾಮ ಓರ್ವ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಗೆ ಬಲಿಯಾದ ಸಿಬ್ಬಂದಿಯನ್ನು ಗಿರಿ ವೆಂಕಟೇಶ ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

ಗನ್ ಮ್ಯಾನ್ ಇರಲಿಲ್ಲ:


Provided by

ಈ ದರೋಡೆ ಬಗ್ಗೆ ಅನುಮಾನ ಸೃಷ್ಟಿಯಾಗಿದ್ದು, ಯಾವುದೇ ಎಟಿಎಂಗೆ ಹಣ ತುಂಬುವ ವೇಳೆ ಗನ್ ಮ್ಯಾನ್, ಭದ್ರತ ಸಿಬ್ಬಂದಿ ಜೊತೆಗಿರುತ್ತಾರೆ. ಆದರೆ ಗನ್ ಮ್ಯಾನ್ ಇಲ್ಲದೆಯೇ ಹಣ ತುಂಬಲು ಬಂದಿದ್ದಾರೆ ಎಂದು ಹೇಳಲಾಗಿದೆ.

ವಾಹನ ಚಾಲಕ ರಾಜಶೇಖರ್ ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ನಾವು ಮೂವರು ಸ್ಥಳಕ್ಕೆ ಬಂದಿದ್ದೆವು. ಬಾಕ್ಸ್ ಒಳಗೆ ಎಷ್ಟು ಹಣ ಇತ್ತು ಎನ್ನುವುದು ಗೊತ್ತಿಲ್ಲ, ಒಂದೇ ಬಾಕ್ಸ್ ಇತ್ತು. ನಾವು ಪ್ರತೀ ದಿನ ಇಲ್ಲಿಯೇ ಹಣವನ್ನು ಎಟಿಎಂಗೆ ತುಂಬಿಸುತ್ತೇವೆ ಎಂದಿದ್ದಾರೆ.

ಗನ್ ಮ್ಯಾನ್ ಎಲ್ಲಿದ್ದರು ಎಂದು ಪ್ರಶ್ನಿಸಿದ ವೇಳೆ ಅವರು 1 ಗಂಟೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದರು. ಇನ್ನೂ ಖಾರದ ಪುಡಿ ಎರಚಿರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.
ಗುಂಡಿನ ದಾಳಿಯಿಂದ ಬಲಿಯಾದ ಗಿರಿ ವೆಂಕಟೇಶ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ