ಇರಲು ಮನೆಯನ್ನೂ ನೀಡಿದ ಅತ್ತೆಯ ಮೇಲೆ ಅಳಿಯ ಎಂತಹ ವರ್ತನೆ ತೋರಿದ್ದಾನೆ ನೋಡಿ - Mahanayaka

ಇರಲು ಮನೆಯನ್ನೂ ನೀಡಿದ ಅತ್ತೆಯ ಮೇಲೆ ಅಳಿಯ ಎಂತಹ ವರ್ತನೆ ತೋರಿದ್ದಾನೆ ನೋಡಿ

siddamma
25/05/2021

ಮಂಡ್ಯ: ಕೊವಿಡ್ ಪಾಸಿಟಿವ್ ಬಂದ ಅತ್ತೆಯನ್ನು ಮನೆಗೆ ಸೇರಿಸಿಕೊಳ್ಳದ ಅಳಿಯ ಅಮಾನವೀಯವಾಗಿ ನಡೆದುಕೊಂಡ ಘಟನೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅತ್ತೆಯ ಮನೆಯಲ್ಲಿಯೇ ಠಿಕಾಣಿ ಹೂಡಿರುವ ಅಳಿಯ, ಅತ್ತೆಯದ್ದೇ ಸ್ವಂಯ ಮನೆಗೆ ಅತ್ತೆ ಬರಬಾರದು ಎಂದು ಗಲಾಟೆ ನಡೆಸಿದ್ದಾನೆ.  ಅತ್ತೆಗೆ ಸೋಂಕು ತಗಲಿದ ವೇಳೆ ಮನೆಯಲ್ಲಿಯೇ ಐಸೋಲೇಷನ್ ನಲ್ಲಿರುವಂತೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರೂ, ಅಳಿಯ ಸಮ್ಮತಿಸಿಲ್ಲ ಎಂದು ವರದಿಯಾಗಿದೆ.

ಸಿದ್ದಮ್ಮ ಎಂಬ ಮಹಿಳೆ ಇಂತಹ ದುಷ್ಟ ಅಳಿಯನನ್ನು ಪಡೆದ ಮಹಿಳೆಯಾಗಿದ್ದಾರೆ. ತನ್ನ ಮನೆಯಲ್ಲಿಯೇ ಜಾಗ ಕೊಟ್ಟು ಇದೀಗ ಆಸ್ಪತ್ರೆಯಲ್ಲಿ ಹೋಗಿ ಮಲಗುವಂತಹ ಸ್ಥಿತಿಯಲ್ಲಿ ಅವರಿದ್ದಾರೆ. ಇದೀಗ  ಸಿದ್ದಮ್ಮ ಅವರನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ