ಮೊಮ್ಮಗುವನ್ನು ನೋಡಲು ಆಸ್ಪತ್ರೆಗೆ ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ!
ಉತ್ತರಕನ್ನಡ: ಮೊಮ್ಮಗುವನ್ನು ನೋಡಲು ಕಾತರದಿಂದ ಬಂದ ಅತ್ತೆಗೆ ಪಾಪಿ ಅಳಿಯನೋರ್ವ ಹಲ್ಲೆ ನಡೆಸಿ ಚಾಕುವಿನಿಂದ ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಆಸ್ಪತ್ರೆಯಲ್ಲಿ ನಡೆದಿದೆ.
ದಾಂಡೇಲಿ ಮೂಲದ ರಮಜಾನ್ (25) ಅತ್ತೆಯ ಮೇಲೆ ಚಾಕುವಿನಿಂದ ಇರಿದ ಆರೋಪಿಯಾಗಿದ್ದು, ಇಲ್ಲಿನ ಕದ್ರಾ ಎಂಬಲ್ಲಿನ ಮಹಮ್ಮದಬೀ ಎಂಬವರು ತನ್ನ ಅಳಿಯನಿಂದಲೇ ಚೂರಿ ಇರಿತಕ್ಕೊಳಗಾದವರು ಎಂದು ಗುರುತಿಸಲಾಗಿದೆ.
ಮಹಮ್ಮದಬೀ ತನ್ನ ಮಗಳ ಮಗುವನ್ನು ನೋಡಲು ಆಸ್ಪತ್ರೆಗೆ ಬಂದಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆ ಮಗುವನ್ನು ನೋಡಲು ಬಂದಿರುವುದು ರಮಜಾನ್ ಇಷ್ಟವಾಗಿರಲಿಲ್ಲ. ಹೀಗಾಗಿ ಮೊದಲೇ ಮದ್ಯದ ಅಮಲಿನಲ್ಲಿದ್ದ ಆತ ಅತ್ತೆಯೊಂದಿಗೆ ಜಗಳ ಆರಂಭಿಸಿದ್ದ ಎನ್ನಲಾಗಿದೆ.
ನನ್ನ ಮಗುವನ್ನು ನೋಡಲು ನೀವ್ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ ರಮಜಾನ್ ಅತ್ತೆಯ ಮೇಲೆ ಹಲ್ಲೆ ನಡೆಸಿರುವುದೇ ಅಲ್ಲದೇ ಚಾಕುವಿನಿಂದ ಅತ್ತೆಯ ಹೊಟ್ಟೆಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪೊಲೀಸರೇ ಅಪರಾಧದಲ್ಲಿ ಭಾಗಿಯಾದರೆ ಸಾರ್ವಜನಿಕರ ರಕ್ಷಣೆ ಹೇಗೆ?: ಅರಗ ಜ್ಞಾನೇಂದ್ರ ಪ್ರಶ್ನೆ
ಕಾಂಗ್ರೆಸ್ ತೊರೆಯುವ ಮೊದಲು ಹಾರ್ದಿಕ್ ಪಟೇಲ್ ಹೈಕಮಾಂಡ್ ಗೆ ಹೇಳಿದ್ದೇನು?
ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ನಾಳೆ ಎಷ್ಟು ಗಂಟೆಗೆ ಪ್ರಕಟವಾಗಲಿದೆ?: ಇಲ್ಲಿದೆ ಮಾಹಿತಿ
ಟೆಸ್ಟ್ ಡ್ರೈವ್ ಮಾಡಿ ಬರುತ್ತೇನೆಂದು ಹೋದವ ಕಾರಿನೊಂದಿಗೆ ಪರಾರಿ!: ಶೋರೂಂ ಸಿಬ್ಬಂದಿ ಕಂಗಾಲು