ಪ್ರಭಾವಿ ಸಚಿವರ ಮೇಲೆ 2 ಬಾರಿ ಹನಿಟ್ರ್ಯಾಪ್ ಗೆ ಯತ್ನ: ಸತೀಶ್ ಜಾರಕಿಹೊಳಿ

ಬೆಂಗಳೂರು: ಪ್ರಭಾವಿ ಸಚಿವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಗೆ ಯತ್ನಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಭಾವಿ ಸಚಿವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ. ಹನಿಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂದ್ರೆ ಆರೋಪಿಸಿದಂತಾಗುತ್ತೆ. ಅದು ರಾಜಕೀಯ ಆರೋಪ ಮಾಡಿದಂತಾಗುತ್ತೆ. ಹನಿಟ್ರ್ಯಾಪ್ ಯತ್ನ ಅಂತೂ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಸಚಿವರು ದೂರು ಕೊಟ್ಟರಷ್ಟೇ ಅದು ಅಧಿಕೃತ. ಹನಿಟ್ರ್ಯಾಪ್ ಯಾರು ಮಾಡುತ್ತಿದ್ದಾರೆಂದು ಎಲ್ಲರಿಗೂ ಗೊತ್ತು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಒಂದು ತಂಡ ಇದೆ ಎಂದು ಹೇಳಿದ ಅವರು, ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಎಲ್ಲ ಪಕ್ಷದವರೂ ಚರ್ಚಿಸಬೇಕಾದ ವಿಷಯ ಇದು ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: