ಅತ್ತಿಗೆಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ನಾದಿನಿ | ಇವರ ನಡುವೆ ನಡೆದದ್ದೇನು ?

mandya news
13/06/2021

ಮಂಡ್ಯ: ಅತ್ತಿಗೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ ಬಳಿಕ, ನಾದಿನಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ತಾಲೂಕಿನ ಕಂಬದ ಹಳ್ಳಿಯಿಂದ ವರದಿಯಾಗಿದೆ.

32 ವರ್ಷ ವಯಸ್ಸಿನ ಅತ್ತಿಗೆ ಪ್ರಿಯಾಂಕ ತನ್ನ ನಾದಿನಿ  31 ವರ್ಷ ವಯಸ್ಸಿನ ಗಿರಿಜಾ ಅವರಿಂದ ಹತ್ಯೆಗೊಳಗಾದವರಾಗಿದ್ದಾರೆ. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಅತ್ತಿಗೆ ಮತ್ತು ನಾದಿನಿಯ ನಡುವೆ ಜಗಳ ನಡೆದಿದ್ದು, ಜಗಳ ತಾರಕಕ್ಕೆ ಏರಿದಾಗ ನಾದಿನಿ ತನ್ನ ಅತ್ತಿಗೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾಳೆ. ಕೋಪವನ್ನು ಬುದ್ಧಿಯ ಕೈಗೆ ನೀಡಿ ಅತ್ತಿಗೆಯನ್ನೇ ಕೊಲೆ ಮಾಡಿದ ನಾದಿನಿ ಬಳಿಕ ಪೊಲೀಸರ ಭಯದಿಂದ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಈ ಘಟನೆ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ. ಬಸರಾಳು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version