‘ಅಖಂಡ ಭಾರತವನ್ನು ನಿರ್ಮಿಸಿದ್ದು ಔರಂಗಜೇಬ್’: ಎಐಎಂಐಎಂ ಶಾಸಕರ ಹೇಳಿಕೆ

ಎಐಎಂಐಎಂ ಬಿಹಾರ ಘಟಕದ ಮುಖ್ಯಸ್ಥ ಮತ್ತು ಶಾಸಕ ಅಖ್ತರುಲ್ ಇಮಾನ್ ಬುಧವಾರ ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರನ್ನು “ಉದಾತ್ತ ಚಕ್ರವರ್ತಿ” ಎಂದು ಕರೆದಿದ್ದಾರೆ. ಮತ್ತು ಅವರು ಭಾರತವನ್ನು ಏಕೀಕರಿಸಿ ಅದನ್ನು ‘ಅಖಂಡ ಭಾರತ’ ಮಾಡಿದರು ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಇಮಾನ್, ಔರಂಗಜೇಬ್ ಬ್ರಿಟಿಷರಂತೆ ಭಾರತವನ್ನು ಲೂಟಿ ಮಾಡಿಲ್ಲ. ಬದಲಾಗಿ, ಅವರು ದೇಶಕ್ಕೆ ಸೇವೆ ಸಲ್ಲಿಸಿದರು. ಮೊಘಲ್ ಚಕ್ರವರ್ತಿಯನ್ನು ಹೊಗಳಿದ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಅವರ ಹೇಳಿಕೆಯ ಬಗ್ಗೆ ತೀವ್ರ ವಿವಾದದ ಮಧ್ಯೆ ಎಐಎಂಐಎಂ ಶಾಸಕರ ಈ ಹೇಳಿಕೆ ಬಂದಿದೆ.
ಔರಂಗಜೇಬ್ ಅವರನ್ನು ಶ್ಲಾಘಿಸಿದ ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜ್ಮಿ, ಅವರ ಆಳ್ವಿಕೆಯಲ್ಲಿ ಭಾರತದ ಗಡಿ ಅಫ್ಘಾನಿಸ್ತಾನ ಮತ್ತು ಬರ್ಮಾ (ಮ್ಯಾನ್ಮಾರ್) ತಲುಪಿತು ಎಂದು ಹೇಳಿದ್ದರು. ಔರಂಗಜೇಬ್ ಕ್ರೂರ ಆಡಳಿತಗಾರನಲ್ಲ ಮತ್ತು ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾನೆ ಎಂದು ಅಜ್ಮಿ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಮೊಘಲ್ ಚಕ್ರವರ್ತಿ ಮತ್ತು ಛತ್ರಪತಿ ಸಂಭಾಜಿ ಮಹಾರಾಜ್ ನಡುವಿನ ಯುದ್ಧವು ರಾಜ್ಯ ಆಡಳಿತಕ್ಕಾಗಿಯೇ ಹೊರತು ಹಿಂದೂ ಮತ್ತು ಮುಸ್ಲಿಮರ ಬಗ್ಗೆ ಅಲ್ಲ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj