ಸಂಸತ್ತಿನಲ್ಲೇ ಆಸ್ಟ್ರೇಲಿಯಾದ ಸಂಸದೆಗೆ ಲೈಂಗಿಕ ಕಿರುಕುಳ: ಪ್ರಭಾವಿ ವ್ಯಕ್ತಿಗಳಿಂದಲೇ ನೀಚ ಬುದ್ದಿ ಪ್ರದರ್ಶನ..! - Mahanayaka

ಸಂಸತ್ತಿನಲ್ಲೇ ಆಸ್ಟ್ರೇಲಿಯಾದ ಸಂಸದೆಗೆ ಲೈಂಗಿಕ ಕಿರುಕುಳ: ಪ್ರಭಾವಿ ವ್ಯಕ್ತಿಗಳಿಂದಲೇ ನೀಚ ಬುದ್ದಿ ಪ್ರದರ್ಶನ..!

15/06/2023

ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಹೌದು. ಸಂಸತ್ತಿನಲ್ಲೇ ತಮ್ಮ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಎಂದು ಆಸ್ಟ್ರೇಲಿಯಾದ ಸಂಸದೆ ಲಿಡಿಯಾ ಥೋರ್ಪೆ ಗಂಭೀರವಾಗಿ ಆರೋಪಿಸಿದ್ದಾರೆ.

ಈ ವಿಚಾರವನ್ನು ಸಂಸತ್ತಿನಲ್ಲಿ ದುಃಖಭರಿತರಾಗಿ ಪ್ರಸ್ತಾಪಿಸಿದ ಅವರು, ಸಂಸತ್‌ ಕಟ್ಟಡ ಮಹಿಳೆಯರಿಗೆ ಕೆಲಸ ಮಾಡಲು ಸುರಕ್ಷಿತ ಸ್ಥಳವಲ್ಲ. ಸಂಸತ್ತಿನಲ್ಲೇ ತನ್ನನ್ನು ಕೆಟ್ಟ ಉದ್ದೇಶದಿಂದ ಕೆಲ ಪ್ರಭಾವಿ ವ್ಯಕ್ತಿಗಳು ಸ್ಪರ್ಶಿಸಿದ್ದರು ಎಂದು ಆರೋಪಿಸಿದ್ದಾರೆ.

ಮೊನ್ನೆ ಥೋರ್ಪೆ ಅವರು ಸಹ ಸೆನೆಟರ್‌ ವಿರುದ್ಧ ಲೈಂಗಿಕ ಹಲ್ಲೆ ಆರೋಪ ಹೊರಿಸಿದ್ದರೂ ಸಂಸದೀಯ ನಿರ್ಬಂಧದ ಬೆದರಿಕೆ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದರು.

ಗುರುವಾರ ಮತ್ತೆ ತನ್ನ ಆರೋಪವನ್ನು ಪುನರುಚ್ಛರಿಸಿದ ಥೋರ್ಪೆ, ಸೆನೆಟರ್‌ ಡೇವಿಡ್‌ ವ್ಯಾನ್‌ ಅವರತ್ತ ಬೊಟ್ಟು ಮಾಡಿದ್ದಾರೆ. ಆದರೆ ಡೇವಿಡ್‌ ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇತ್ತ ಡೇವಿಡ್ ಅವರ ಲಿಬರಲ್‌ ಪಕ್ಷ ಅವರನ್ನು ಅಮಾನತುಗೊಳಿಸಿದೆ.

ಕಚೇರಿ ಬಾಗಿಲಿನ ಕಡೆಗೆ ನನಗೆ ನಡೆಯಲು ಭಯವಾಗಿತ್ತು. ಬಾಗಿಲು ತೆರೆದು ಯಾರೂ ಇಲ್ಲ ಎಂದು ದೃಢಪಡಿಸಿ ನಂತರ ಹೊರಗೆ ಕಾಲಿಡುತ್ತಿದ್ದೆ. ಈ ಕಟ್ಟಡದೊಳಗೆ ಪ್ರವೇಶಿಸುವಾಗ ಯಾರಾದರೂ ನನ್ನ ಜೊತೆಗಿರುವಂತೆ ನೋಡಿಕೊಳ್ಳುತ್ತಿದ್ದೆ ಎಂದು ನೋವು ತೋಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ