ಟೀಮ್‌ ಇಂಡಿಯಾ ವಿರುದ್ಧ ಆಸ್ಟ್ರೇಲಿಯ ಭರ್ಜರಿ ಗೆಲುವು: ಆಸ್ಟ್ರೇಲಿಯ ಮುಡಿಗೇರಿದ ವಿಶ್ವಕಪ್‌ - Mahanayaka

ಟೀಮ್‌ ಇಂಡಿಯಾ ವಿರುದ್ಧ ಆಸ್ಟ್ರೇಲಿಯ ಭರ್ಜರಿ ಗೆಲುವು: ಆಸ್ಟ್ರೇಲಿಯ ಮುಡಿಗೇರಿದ ವಿಶ್ವಕಪ್‌

australia
19/11/2023

ವಿಶ್ವಕಪ್‌ –2023ಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.  ಮಾರ್ನಸ್‌ ಲಾಬುಶೇನ್‌ ಹಾಗೂ ಟ್ರಾವಿಸ್‌ ಹೆಡ್‌ ಅವರ ಜೊತೆಯಾಟ ಆಸ್ಟ್ರೇಲಿಯ ಗೆಲುವಿಗೆ ಸಹಕಾರಿಯಾಯಿತು.

ಕೇವಲ ಮೂರು ವಿಕೆಟ್‌ ಗಳ ನಷ್ಟದೊಂದಿಗೆ ಆಸ್ಟ್ರೇಲಿಯಾ ಭರ್ಜರಿ ಮುನ್ನಡೆ ಸಾಧಿಸಿತು. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಮ್‌ ಇಂಡಿಯಾ ಬೌಲರ್ಸ್‌ ಮೂರು ವಿಕೆಟ್‌ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಕ್ಷೇತ್ರ ರಕ್ಷಣೆಯಲ್ಲಿ  ಟೀಂ ಇಂಡಿಯಾ ಎಡವಿತು.  ಸರಿಯಾದ ಕ್ಷೇತ್ರ ರಕ್ಷಣಾ ತಂತ್ರ  ಮಾಡಿದ್ದರೆ, ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಬಹುದಿತ್ತು. ಆಸ್ಟ್ರೇಲಿಯ ಕ್ಷೇತ್ರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಮ್‌ ಇಂಡಿಯಾ, 10 ವಿಕೆಟ್‌ ಗಳ ನಷ್ಟಕ್ಕೆ 241 ರನ್‌ ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡಕ್ಕೆ ನೀಡಿತು. ಮಾರ್ನಸ್‌ ಲಾಬುಶೇನ್‌ ಹಾಗೂ ಟ್ರಾವಿಸ್‌ ಹೆಡ್‌ ಅವರ ಅಬ್ಬರದ ಬ್ಯಾಟಿಂಗ್‌ ಆಸ್ಟ್ರೇಲಿಯಾದ ಗೆಲುವಿಗೆ ಸಹಕಾರಿಯಾಯಿತು.

ಇತ್ತೀಚಿನ ಸುದ್ದಿ