ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು! - Mahanayaka
12:07 AM Tuesday 25 - November 2025

ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!

kadaba news
28/08/2021

ಕಡಬ: ವಿಡಿಯೋ ಕಾಲ್ ಮೂಲಕ ಆಟೋ ಚಾಲಕನನ್ನು ಬಲೆಗೆ ಬೀಳಿಸಿದ ಯುವತಿ, ಬೆತ್ತಲೆ ವಿಡಿಯೋ ಮಾಡಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದು, ಆತ ನಿರಾಕರಿಸಿದಾಗ ಆತನ ಮಾನ ಹರಾಜು ಮಾಡಿದ ಘಟನೆ ಕಡಬ ಸಮೀಪದ ಬಿಳಿನೆಲೆಯಲ್ಲಿ ನಡೆದಿದೆ.

ಯುವತಿಯೋರ್ವಳು ವಿಡಿಯೋ ಕರೆ ಮಾಡಿ, ತಾನು ಬೆತ್ತಲಾಗಿ ನಿಂತಿದ್ದು, ಆಟೋ ಚಾಲಕನ್ನು ಕೂಡ ಬೆತ್ತಲಾಗುವಂತೆ ಹೇಳಿದ್ದಾಳೆ. ಆ ಬಳಿಕ ಈ ವಿಡಿಯೋ ರೆಕಾರ್ಡ್ ನ್ನು ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಹಣ ನೀಡಲು ನಿರಾಕರಿಸಿದಾಗ. ಆತ ಸದಸ್ಯನಾಗಿದ್ದ ವಾಟ್ಸಾಪ್ ಗ್ರೂಪ್ ಗಳಲ್ಲಿ ಆತನ ಬೆತ್ತಲೆ ವಿಡಿಯೋ ಶೇರ್ ಮಾಡಿರುವ ಘಟನೆ ನಡೆದಿದೆ.

ನಗ್ನಳಾಗಿ ವಿಡಿಯೋ ಕರೆಯಲ್ಲಿದ್ದ ಯುವತಿಯು ಆಟೋ ಚಾಲಕನಿಗೆ ಬಟ್ಟೆ ಬಿಚ್ಚುವಂತೆ ಪ್ರೇರೇಪಿಸಿದ್ದಾಳೆ. ಆಕೆಯ ಉದ್ದೇಶ ಅರಿಯದ ಯುವಕ ಸುಲಭವಾಗಿ ಆಕೆಯ ಬಲೆಗೆ ಬಿದ್ದಿದ್ದಾನೆ. ಇದೀಗ ಒಂದು ಕ್ಷಣ ಮೈಮರೆತಿದ್ದಕ್ಕಾಗಿ ಆಟೋ ಚಾಲಕ ಪಶ್ಚಾತಾಪ ಪಡುವಂತಾಗಿದೆ.

ಇಂತಹ ಬಹಳಷ್ಟು ಘಟನೆಗಳು ದೇಶದಾದ್ಯಂತ ನಡೆಯುತ್ತಿದೆ. ಪ್ರಭಾವಿಗಳು ಕೂಡ ಇಂತಹ ವಿಡಿಯೋ ಟ್ರ್ಯಾಪ್ ಗೆ ಒಳಗಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಶ್ರೀಮಂತರನ್ನು ಗುರಿಯಾಗಿಸಿ ಇಂತಹ ಬ್ಲ್ಯಾಕ್ ಮೇಲ್ ಗಳನ್ನು ಮಾಡಲಾಗುತ್ತಿತ್ತು.  ಇದೀಗ ಗ್ರಾಮೀಣ ಪ್ರದೇಶಕ್ಕೂ ಇದು ಕಾಲಿಟ್ಟಿದೆ. ಸಾರ್ವಜನಿಕರು ಇಂತಹ ಕೃತ್ಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ಇನ್ನಷ್ಟು ಸುದ್ದಿಗಳು…

ಅಮಾನವೀಯ ಘಟನೆ: ಪತ್ನಿಯ ಖಾಸಗಿ ಅಂಗಕ್ಕೆ ಸೂಜಿದಾರದಿಂದ ಹೊಲಿಗೆ ಹಾಕಿದ ಪತಿ

ಮೈಸೂರು: ಅತ್ಯಾಚಾರ ಪ್ರಕರಣ | ತಮಿಳುನಾಡಿನಲ್ಲಿ ಐವರು ಆರೋಪಿಗಳ ಬಂಧನ

ಮೈಸೂರಿನ ಬೆನ್ನಲ್ಲೇ ಮತ್ತೊಂದು ಸಾಮೂಹಿಕ ಅತ್ಯಾಚಾರ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಆ.30ರಂದು ಟೀಮ್ ಹಿಂದುತ್ವ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ಲಬ್ ಹೌಸ್ ನಲ್ಲಿ ಹಿಂದೂ ಸಮಾವೇಶ | ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ

126 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ವಿಮಾನದ ಪೈಲಟ್ ಗೆ ಹೃದಯಾಘಾತ: ಮುಂದೆ ನಡೆದದ್ದೇನು?

ಅನಿಷ್ಟ ಕಾಮುಕರನ್ನು ಬಂಧಿಸುವ, ಶಿಕ್ಷಿಸುವ ಕಾನೂನು ಗಟ್ಟಿಯಾಗಬೇಕು | ನಟಿ ಶೃತಿ

ಕಾನೂನು ಸುವ್ಯವಸ್ಥೆ ಹತೋಟಿಗೆ ಬರಲಿ ಎಂದು ಚಾಮುಂಡಿಯನ್ನು ಬೇಡಿದ್ದೇನೆ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ!

ಇತ್ತೀಚಿನ ಸುದ್ದಿ