ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ? - Mahanayaka
10:40 PM Monday 16 - September 2024

ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?

auto driver
23/08/2021

ಲಕ್ನೋ: ಆಟೋ ಹತ್ತುವಾಗ ಒಂದು ಪ್ರಯಾಣ ದರ ಹೇಳುವ ಕೆಲವು ಆಟೋ ಚಾಲಕರು ಆಟೋದಿಂದ ಇಳಿಯುವಾಗ ರಸ್ತೆ ಸರಿ ಇಲ್ಲ, ಹೋಗುವಾಗ ಖಾಲಿ ಹೋಗಬೇಕು ಹೀಗೆ ನಾನಾ ರೀತಿಯ ಕಾರಣಗಳನ್ನು ನೀಡಿ ಪ್ರಯಾಣಿಕರನ್ನು ಯಾಮಾರಿಸುವುದಿದೆ. ಇಲ್ಲೊಬ್ಬ ಆಟೋ ಚಾಲಕ ಪ್ರಯಾಣಿಕರು ಆಟೋದಿಂದ ಇಳಿದ ಹೆಚ್ಚುವರಿ ಬಾಡಿಗೆ ಕೇಳಿದ್ದಕ್ಕೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ನೋದಲ್ಲಿ  ಆ.21ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪತಿ ಹಾಗೂ ಪತ್ನಿ ಇಬ್ಬರು ಆಟೋ ಏರಿದ್ದಾರೆ. ಲಕ್ನೋದ ತೆದಿಪುಲಿಯ ಮೇನ್ ಚೌಕ್ ಬಳಿಯಲ್ಲಿ  ದಂಪತಿ ಇಳಿಯುತ್ತಿದ್ದಂತೆಯೇ ಆಟೋ ಚಾಲಕ ಹೇಳಿದ ದರಕ್ಕಿಂತಲೂ ಹೆಚ್ಚುವರಿಯಾಗಿ ಮತ್ತೆ ಹಣ ಕೇಳಿದ್ದಾನೆ ಎನ್ನಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಹಾಗೂ ಆಟೋ ಚಾಲಕನ ನಡುವೆ ತೀವ್ರವಾಗಿ ವಾಗ್ದಾಳಿ ನಡೆದಿದೆ. ಈ ವೇಳೆ ಆಟೋ ಚಾಲಕ ಟ್ರಾಫಿಕ್ ಪೊಲೀಸರನ್ನು ಸಹಾಯಕ್ಕಾಗಿ ಕರೆದಿದ್ದಾನೆ. ಈ ವೇಳೇ ವಾಗ್ದಾಳಿ ನಡೆಸುತ್ತಲೇ ಆಕ್ರೋಶಕ್ಕೀಡಾದ ಮಹಿಳೆ ಆಕ್ರೋಶಗೊಂಡು ಆಟೋ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಈ ವೇಳೆ ಆಟೋ ಚಾಲಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಪ್ಪಲಿ ತೆಗೆದುಕೊಂಡು ಪೊಲೀಸರ ಎದುರೇ ಆತನಿಗೆ ಥಳಿಸಿದ್ದಾಳೆ. ಈ ವೇಳೆ ಪೊಲೀಸರು ಆಕೆಯನ್ನು ತಡೆದಿದ್ದಾರೆ.


Provided by

ಇನ್ನಷ್ಟು ಸುದ್ದಿಗಳು…

ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಹಾರಿದ ಗುಂಡು | ಕಾನ್ಟ್ಟೇಬಲ್ ದಾರುಣ ಸಾವು

ಅಫ್ಘಾನಿಸ್ತಾನ ಮತ್ತೆ ಭಯೋತ್ಪಾದನೆಯ ಕೇಂದ್ರಬಿಂದು ಆಗದಿರಲಿ: ಸಿಂಗಪುರ ಪ್ರಧಾನಿ

ಕಳ್ಳ ನುಂಗಿದ ಚಿನ್ನದ ಸರವನ್ನು ಹೊರ ತೆಗೆದದ್ದು ಹೇಗೆ ಗೊತ್ತಾ? | ಕೊನೆಗೂ ಕಳ್ಳನ ಪ್ಲಾನ್ ಪ್ಲಾಪ್ ಆಯಿತು!

ಜಾತಿ ಜನಗಣತಿ ನಡೆಸಲು ಪ್ರಧಾನಿ ಮೋದಿಗೆ ಬೇಡಿಕೆ ಇಟ್ಟ ನಿತೀಶ್ ಕುಮಾರ್ ನೇತೃತ್ವದ ನಿಯೋಗ

ಹೆಣ ಅಂತ ಅಂದು ಕೊಂಡ್ರು, ಆದ್ರೆ ಅದು ಜನ! | ಪೊಲೀಸರನ್ನೇ ಬೆಚ್ಚಿಬೀಳಿಸಿದ ಭೂಪ

ಬಿಗ್ ಬಾಸ್ ಕ್ಯಾಮರ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಲಾಗಿದೆ | ಸ್ಪರ್ಧಿಯಿಂದ ಗಂಭೀರ ಆರೋಪ

ಜಿಮ್ ನಲ್ಲಿ ಜೊತೆಯಾಗಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ!

ಇತ್ತೀಚಿನ ಸುದ್ದಿ