3 ಕೋಟಿ ತೆರಿಗೆ ಪಾವತಿಸಿ ಎಂದು ಬಡ ಆಟೋ ಚಾಲಕನಿಗೆ ಐಟಿ ಇಲಾಖೆ ನೋಟಿಸ್!
ಮಥುರಾ: 3 ಕೋಟಿ ರೂಪಾಯಿ ಪಾವತಿಸುವಂತೆ ಉತ್ತರ ಪ್ರದೇಶದ ರಿಕ್ಷಾ ಚಾಲಕರೊಬ್ಬರಿಗೆ ಆದಾಯ ತೆರಿಗೆ ಇಲಾಖೆ(IT) ನೋಟಿಸ್ ನೀಡಿದ್ದು, ಈ ನೋಟಿಸ್ ಕಂಡು ಬೆಚ್ಚಿ ಬಿದ್ದಿದ್ದ ರಿಕ್ಷಾ ಚಾಲಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಥುರಾದ ಬಾಕಾಳ್ ಪುರದ ಅಮರ್ ಕಾಲೋನಿಯ ರಿಕ್ಷಾ ಚಾಲಕ ಪ್ರತಾಪ್ ಸಿಂಗ್ ಅವರು ಈ ನೋಟಿಸ್ ಪಡೆದವರಾಗಿದ್ದಾರೆ. ಈ ನೋಟಿಸ್ ದೊರೆತ ಬಳಿಕ ಅವರು ಹೆದ್ದಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ ಘಟನೆಯನ್ನು ವಿವರಿಸಿರುವ ರಿಕ್ಷಾ ಚಾಲಕ ಪ್ರತಾಪ್ ಸಿಂಗ್, ಬ್ಯಾಂಕ್ ನವರು ಐ.ಟಿ ರಿಟರ್ನ್ಸ್ ದಾಖಲೆ ಕೇಳಿದ್ದರಿಂದ ಮಾರ್ಚ್ 15ರಂದು ಬಾಕಾಳ್ ಪುರದ ತೇಜ್ ಪ್ರಕಾಶ್ ಉಪಾಧ್ಯಾಯ ಎಂಬುವರ ಮಾಲಿಕತ್ವದ ಜನ್ ಸುವಿಧಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದೆ. ಬಳಿಕ ಸಂಜಯ್ ಸಿಂಗ್ ಎಂಬುವರು ಪಾನ್ ಕಾರ್ಡೊಂದರ ನಕಲು ಪ್ರತಿಯನ್ನು ನೀಡಿದ್ದರು. ಅನಕ್ಷರಸ್ಥನಾಗಿರುವುದರಿಂದ ಮೂಲ ಪಾನ್ ಕಾರ್ಡ್ ಮತ್ತು ತನಗೆ ದೊರೆತ ನಕಲು ಪ್ರತಿಯ ವ್ಯತ್ಯಾಸ ತಿಳಿಯುವುದು ಸಾಧ್ಯವಾಗಿಲ್ಲ. ಆದರೆ, ಅಕ್ಟೋಬರ್ 19ರಂದು ರೂ.3,47,54,896 ಪಾವತಿಸುವಂತೆ ಐ.ಟಿ ಇಲಾಖೆಯಿಂದ ನೋಟಿಸ್ ಬಂದಿದೆ. ವಿಚಾರಿಸಿದಾಗ, ಯಾರೋ ನಿಮ್ಮನ್ನು ಯಾಮಾರಿಸಿ ನಿಮ್ಮ ಹೆಸರು ಬಳಸಿಕೊಂಡು ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಸಂಖ್ಯೆ ಪಡೆದಿದ್ದಾರೆ. 2018-19ರಲ್ಲಿ ಅವರ ವಹಿವಾಟು ರೂ.43,44,36,201 ಆಗಿತ್ತು ಎಂದು ತಿಳಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಇಷ್ಟೊಂದು ಗಂಭೀರವಾದ ಪ್ರಕರಣ ನಡೆದಿದ್ದರೂ ಈ ಬಗ್ಗೆ ಪ್ರತಾಪ್ ಸಿಂಗ್ ನೀಡಿರುವ ದೂರನ್ನು ಪೊಲೀಸರು ದಾಖಲಿಸಿಕೊಂಡಿಲ್ಲ. ಇದರ ಬದಲಾಗಿ, ಏನು ಸಮಸ್ಯೆ ಆಗಿದೆ ಎಂಬುದರ ಕುರಿತು ಗಮನಹರಿಸುತ್ತೇವೆ ಎಂದು ಠಾಣೆ ಅಧಿಕಾರಿ (ಎಸ್ ಎಚ್ ಒ) ಅನುಜ್ ಕುಮಾರ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಶ್ರೀಮಂತರಿಗೆ, ಮೇಲ್ಜಾತಿಯ ಜನರಿಗೆ ಮಾತ್ರ ರಕ್ಷಣೆ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ
ಶಾಲೆಗೆ ಹೊರಟ ಪುಟಾಣಿಗಳು: ಇಂದಿನಿಂದ 1ರಿಂದ 5ನೇ ತರಗತಿಗಳು ಪ್ರಾರಂಭ
ಅಕ್ಟೋಬರ್ 25ರಂದು ಮಂಗಳೂರಿನಲ್ಲಿ ‘ಸಂವಿಧಾನ ದೀಕ್ಷೆ’ ಕಾರ್ಯಕ್ರಮ
ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್ ಗೆ ಅಲರ್ಜಿ | ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವುದೇ ಕುಮಾರಸ್ವಾಮಿಯ ಗುರಿ: ಜಮೀರ್ ಆರೋಪ