ಸೆಖೆಯಿಂದ ತಪ್ಪಿಸಿಕೊಳ್ಳಲು ಆಟೋದ ಮೇಲೆಯೇ ಗಿಡ ನೆಟ್ಟ ಆಟೋ ಚಾಲಕ - Mahanayaka
1:01 PM Thursday 12 - December 2024

ಸೆಖೆಯಿಂದ ತಪ್ಪಿಸಿಕೊಳ್ಳಲು ಆಟೋದ ಮೇಲೆಯೇ ಗಿಡ ನೆಟ್ಟ ಆಟೋ ಚಾಲಕ

auto
05/05/2022

ದೆಹಲಿ: ವಾಹನದೊಳಗೆ ತಂಪಾಗಿ ಕುಳಿತುಕೊಳ್ಳಲು ಎಸಿಗಳನ್ನು ಬಳಸುವುದನ್ನು ಕಂಡಿದ್ದೇವೆ. ಆದರೆ, ಇಲ್ಲೊಬ್ಬರು ಆಟೋ ಚಾಲಕ ವಿಭಿನ್ನ ಆಲೋಚನೆಯನ್ನು ಜಾರಿಗೆ ತಂದಿದ್ದು, ಇದೀಗ ಇತರ ವಾಹನ ಚಾಲಕರಿಗೂ ಮಾದರಿಯಾಗಿದ್ದಾರೆ.

ಆಟೋ ಚಾಲಕ ಮಹೇಂದ್ರ ಕುಮಾರ್ ಎಂಬವರು ಈ ವಿಶಿಷ್ಟ ಆಲೋಚನೆಯನ್ನು ಜಾರಿಗೆ ತಂದ ಆಟೋ ಚಾಲಕರಾಗಿದ್ದಾರೆ. ಆಟೋದ ಮೇಲ್ಛಾವಣಿಯಲ್ಲಿ  ಗಿಡಗಳನ್ನು ನೆಡುವ ಮೂಲಕ ಉದ್ಯಾನವನವನ್ನೇ ಸೃಷ್ಟಿಸಿದ್ದು, ಈ ಮೂಲಕ ಆಟೋದಲ್ಲಿ ಬರುವ ಪ್ರಯಾಣಿಕರಿಗೆ ತಂಪಾದ ಪ್ರಯಾಣ ನೀಡಲು ಮುಂದಾಗಿದ್ದಾರೆ.

ಮಹೇಂದ್ರ ಕುಮಾರ್ ಅವರು ತಮ್ಮ  ಆಟೋ ರಿಕ್ಷಾ ಮೇಲೆ  ತರಕಾರಿ, ಗಿಡಮೂಲಿಕೆ ಸೇರಿದಂತೆ ಇತರೆ ಗಿಡಗಳು ಸೇರಿದಂತೆ ಸುಮಾರು 20 ಗಿಡಗಳನ್ನು ಬೆಳೆಸಿದ್ದಾರೆ. ಇದೀಗ ಇವರ ಈ ವಿಶೇಷ ಆಟೋವನ್ನು ಜನರು ಚಲಿಸುವ ಉದ್ಯಾನವನ ಎಂದೇ ಗುರುತಿಸಲು ಆರಂಭಿಸಿದ್ದಾರೆ.

ವಾಹನದ ಮೇಲ್ಛಾವಣಿಗೆ ಯಾವುದೇ  ರೀತಿಯಲ್ಲಿ ಹಾನಿಯಾಗದ ರೀತಿಯಲ್ಲಿ ಆಟೋದಲ್ಲಿ ಗಿಡಗಳನ್ನು ನೆಡಲಾಗಿದೆ.  ಮೊದಲು ಚಾಪೆ ಹಾಸಿ ಅದರ ಮೇಲೆ ಗೋಣಿಚೀಲ ಇಟ್ಟು ಮಣ್ಣು ಹಾಕಿದ ನಂತರ ಬಿತ್ತನೆ ಮಾಡಲಾಗುತ್ತದೆ.  ದಿನಕ್ಕೆರಡು ಬಾರಿಯಾದರೂ ಗಿಡಗಳಿಗೆ ನೀರು ಹಾಕುತ್ತೇನೆ ಎನ್ನುತ್ತಾರೆ.  ಈ ಗುಂಪಿನಲ್ಲಿ ಪಾಲಕ್ ಮತ್ತು ಟೊಮೆಟೊಗಳನ್ನು ಸಹ ಬೆಳೆಯುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗ್ರಾಹಕರಿಗೆ ಶಾಕ್ ನೀಡಲಿರುವ ಬ್ರಿಟಾನಿಯಾ:  ಬಿಸ್ಕೆಟ್ ಗಳ ಬೆಲೆ ಹೆಚ್ಚಾಗಲಿದೆಯೇ?

ಕೆಜಿಎಫ್ 2 ಅಬ್ಬರಕ್ಕೆ ದಂಗಲ್ ಟೀಮ್ ಕಂಗಾಲ್! | ದಾಖಲೆ ಪುಡಿಗಟ್ಟಿದ ಸುಲ್ತಾನ

ಪತ್ನಿ ಮಗುವಿಗೆ ಬೆಂಕಿ ಹಚ್ಚಿ ಬಾವಿಗೆ ಹಾರಿದ ಪಾಪಿ ಪತಿ: ಮೂವರ ದುರಂತ ಸಾವು

ಮಸೀದಿಗಳ ಎದುರು ಸೌಂಡ್​ ಬಾಕ್ಸ್ ಹಾಕಿ ಹನುಮಾನ್​ ಚಾಲೀಸ್ ಹಾಕ್ತೇವೆ: ಬಿಜೆಪಿ ಸರ್ಕಾರಕ್ಕೆ ಸಿದ್ಧಲಿಂಗ ಸ್ವಾಮೀಜಿ ಸವಾಲು

ಮತ್ತೊಮ್ಮೆ ಪ್ರಶಸ್ತಿ ಪಡೆದ “ಜೈ ಭೀಮ್” ಚಿತ್ರ: ಒಂದೇ ಸಮಾರಂಭದಲ್ಲಿ 2 ಪ್ರಶಸ್ತಿ!

ಇತ್ತೀಚಿನ ಸುದ್ದಿ