ಪ್ರಿಯಕರನ ಜೊತೆ ಜಗಳವಾಡುತ್ತಿದ್ದಾಗಲೇ ಆಟೋದಿಂದ ಬಿದ್ದ ಯುವತಿ ದಾರುಣ ಸಾವು
ನವದೆಹಲಿ: ಚಲಿಸುತ್ತಿದ್ದ ಆಟೋದಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ದೆಹಲಿಯ ಕೇಲ್ ಖಾನ್ ಪ್ರದೇಶದಲ್ಲಿ ನಡೆದಿದ್ದು, ಇಲ್ಲಿನ ಕಲ್ಯಾಣ್ ಪುರಿ ನಿವಾಸಿ ಪರಮ್ ಜಿತ್ ಕೌರ್ ಮೃತ ಮಹಿಳೆ.
ತನ್ನ ಸ್ನೇಹಿತನೊಂದಿಗೆ ಆಟೋದಿಂದ ಹೋಗುತ್ತಿದ್ದ ವೇಳೆ ಪರಮ್ ಜಿತ್ ತನ್ನ ಸ್ನೇಹಿತರೊಂದಿಗೆ ಆಟೋದಲ್ಲಿಹೋಗುವಾಗ ಬಿದ್ದು ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದಂತೆ ಮೋತಿಬಾಗ್ ನಿವಾಸಿ ಹೃತಿಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಪರಮ್ ಜೀತ್, ಹೃತಿಕ್ ಜೊತೆಗೆ ಸಂಬಂಧ ಹೊಂದಿದ್ದಳು ಎಂದು ತಿಳಿದು ಬಂದಿದೆ. ಇವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇಲ್ಲಿನ ಆಶ್ರಮ ಚೌಕ್ ಬಳಿ ಆಟೋ ರಿಕ್ಷಾ ಹತ್ತುವ ಮೊದಲೇ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗಿದೆ.
ಹೃತಿಕ್ ಹಲವಾರು ಬಾರಿ ಪರಮ್ ಜೀತ್ ಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದನು. ಆಟೋದಲ್ಲಿಯೂ ಇಬ್ಬರ ನಡುವೆ ತೀವ್ರವಾಗಿ ಜಗಳವಾಗಿದೆ ಎಂದು ಹೇಳಲಾಗಿದೆ. ಈ ವೇಳೆ ಪರಮ್ ಜೀತ್ ಕಪಾಳಕ್ಕೆ ಹೊಡೆದಿದ್ದಾನೆ. ಆ ಸಂದರ್ಭದಲ್ಲಿ ಆಕೆ ತನ್ನ ಮೊಬೈಲ್ ನ್ನು ಎಸೆದಿದ್ದಾಳೆ. ಆಟೋ ರಿಕ್ಷಾ ಎನ್ ಎಚ್ 24 ಫ್ಲೈಓವರ್ ತಲುಪಿದಾಗ, ಮಹಿಳೆ ವಾಹನದಿಂದ ಕೆಳಗಡೆ ಬಿದ್ದಿದ್ದಳು ಎಂದು ಆಟೋ ಚಾಲಕ ಶಂಶುಲ್ ಅಲಿ ಮತ್ತು ಹೃತಿಕ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.