ಜಿಯೋದ ‘ಇಂಟೆಲಿಜೆಂಟ್ ಶಾಪಿಂಗ್ ಕಾರ್ಟ್’ನಿಂದ ಗ್ರಾಹಕರಿಗೆ ಸ್ವಯಂಚಾಲಿತ ಬಿಲ್
ನವದೆಹಲಿ: ಇನ್ನು ಮುಂದೆ ದಿನಸಿ, ಕಿರಾಣಿ ಅಂಗಡಿಗಳಲ್ಲಿ ಉದ್ದನೆಯ ಸಾಲಿನಲ್ಲಿ ನಿಂತು ಬಿಲ್ ಮಾಡಿಸಬೇಕು ಅನ್ನುವ ಸ್ಥಿತಿ ಇರುವುದಿಲ್ಲ. ಅಂದ ಹಾಗೆ ಈಗಾಗಲೇ ಕೆಲವು ಮಳಿಗೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಅಂದಹಾಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದರಿಂದ ಇದು ಸಾಧ್ಯವಾಗಲಿದೆ. ನಿಮಗೆ ಗೊತ್ತಿರಲಿ, ಎಐ ಹೊಂದಿರುವ ಜಿಯೋದ ಶಾಪಿಂಗ್ ಕಾರ್ಟ್ ಖರೀದಿ ಮಾಡಿದ ಬಿಲ್ ಅನ್ನು ಸ್ವಯಂ ಚಾಲಿತವಾಗಿ ಸಿದ್ಧಪಡಿಸುತ್ತದೆ. ರಿಲಯನ್ಸ್ ಜಿಯೋದ ಈ ಅದ್ಭುತ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ಪ್ರದರ್ಶಿಸಲಾಗಿದೆ.
ಇದನ್ನು ಬಳಸುವುದು ಕೂಡ ತುಂಬ ಸುಲಭ. ಮಳಿಗೆಗಳಲ್ಲಿ ಲಭ್ಯವಿರುವ ಇಂಟೆಲಿಜೆಂಟ್ ಶಾಪಿಂಗ್ ಕಾರ್ಟ್‌ಗಳನ್ನು ನೇರವಾಗಿ ಬಿಲ್ಲಿಂಗ್ ಡೆಸ್ಕ್‌ಗೆ ಸಂಪರ್ಕಿಸಲಾಗುತ್ತದೆ. ಗ್ರಾಹಕರು ಕಾರ್ಟ್‌ನಲ್ಲಿ ಯಾವುದೇ ಸರಕುಗಳನ್ನು ಹಾಕಿದರೂ ಅದಾಗಲೇ ಕಾರ್ಟ್‌ನಲ್ಲಿ ಅಳವಡಿಸಲಾದ, ಎಐ(ಕೃತಕ ಬುದ್ಧಿಮತ್ತೆ)ಯನ್ನು ಹೊಂದಿದ ಕ್ಯಾಮೆರಾಗಳು ಮತ್ತು ಸ್ಕ್ಯಾನರ್‌ಗಳು ಸೆರೆಹಿಡಿಯುತ್ತವೆ ಮತ್ತು ಅವುಗಳನ್ನು ಬಿಲ್ಲಿಂಗ್ ಡೆಸ್ಕ್‌ಗೆ ಕಳುಹಿಸುತ್ತವೆ. ಆ ನಂತರ ಉತ್ಪನ್ನದ ಬೆಲೆಯನ್ನು ಡೇಟಾ ಬೇಸ್‌ನಿಂದ ಹೊರತೆಗೆದು ಬಿಲ್‌ಗೆ ಸೇರಿಸಲಾಗುತ್ತದೆ. ಗ್ರಾಹಕರು ಶಾಪಿಂಗ್ ಗಾಗಿ ತಪ್ಪಾಗಿ ಕಾರ್ಟ್‌ಗೆ ಸೇರಿಸಲಾದ ಉತ್ಪನ್ನವನ್ನು ತೆಗೆದುಹಾಕಿದರೆ, ಆ ಉತ್ಪನ್ನದ ಬೆಲೆ ಸ್ವಯಂಚಾಲಿತವಾಗಿ ಬಿಲ್‌ನಿಂದ ತೆಗೆಯಲಾಗುತ್ತದೆ. ಬಿಲ್ಲಿಂಗ್ ಡೆಸ್ಕ್ ಗ್ರಾಹಕರ ಕಾರ್ಟ್‌ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಗ್ರಾಹಕರ ಬಿಲ್ ಪಾವತಿಗೆ ಸಿದ್ಧವಾಗುತ್ತದೆ.
ರಿಲಯನ್ಸ್ ರೀಟೇಲ್ ಹೈದರಾಬಾದ್ ಮತ್ತು ಮುಂಬೈನಲ್ಲಿ ಆಯ್ದ ಮಳಿಗೆಗಳಲ್ಲಿ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಶಾಪಿಂಗ್ ಕಾರ್ಟ್‌ನ ಪ್ರಾಯೋಗಿಕ ಬಳಕೆ ಮಾಡುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದ ಕಾರಣದಿಂದ ಶೀಘ್ರದಲ್ಲೇ ಇದನ್ನು ಇತರ ರಾಜ್ಯಗಳಲ್ಲಿಯೂ ಜಾರಿಗೆ ತರಬಹುದು.
ಸಣ್ಣ ಅಂಗಡಿದಾರರ ಎಲೆಕ್ಟ್ರಾನಿಕ್ ಮಾಪಕಗಳನ್ನು ಕೃತಕ ಬುದ್ಧಿಮತ್ತೆಗೆ ಸಹ ಜೋಡಿಸಬಹುದು. ಹೆಸರುಬೇಳೆಯನ್ನು ಎಲೆಕ್ಟ್ರಾನಿಕ್ ಸ್ಕೇಲ್‌ನಲ್ಲಿ ಇರಿಸಿದಾಗ, ಅದು ಬೇಳೆಯ ತೂಕವನ್ನು ಮಾತ್ರವಲ್ಲದೆ ಅದರ ಮೇಲೆ ಅಳವಡಿಸಲಾದ ಬೆಲೆಯನ್ನು ಸಹ ಕ್ಯಾಮೆರಾಗಳಿಂದ ಗುರುತಿಸುತ್ತದೆ. ಅಂದರೆ, ಯಾವುದೇ ರೀತಿಯ ಉತ್ಪನ್ನವನ್ನು ಎಲೆಕ್ಟ್ರಾನಿಕ್ ಮಾಪಕದಲ್ಲಿ ಇರಿಸಿದಾಗ ಅದರ ಅಳತೆ ಮತ್ತು ಬೆಲೆ ತಕ್ಷಣವೇ ತಿಳಿಯುತ್ತದೆ. ಸ್ಕೇಲ್‌ನ ಮುಂದೆ ಶಾಪಿಂಗ್ ಕಾರ್ಟ್‌ನಂತಹ ಗುರುತು ಇರುತ್ತದೆ, ಅದರಲ್ಲಿ ಪ್ಯಾಕ್ ಮಾಡಿದ ಉತ್ಪನ್ನದ ಬೆಲೆಯನ್ನು ಇರಿಸಿದ ತಕ್ಷಣ ಬಿಲ್‌ಗೆ ಸೇರಿಸಲಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: