ಕೊರೊನಾ ರೋಗಿಗಳ ಮೇಲೆ ಅವಧಿ ಮೀರಿದ ರೆಮ್ಡೆಸಿವಿರ್ ಔಷಧಿ ಬಳಕೆ | ವ್ಯಾಪಕ ಆಕ್ರೋಶ
25/04/2021
ಚೆನ್ನೈ: ಕೆಲವರಿಗೆ ಪ್ರಾಣದ ಪ್ರಶ್ನೆ ಆದರೆ, ಇನ್ನು ಕೆಲವರಿಗೆ ಹಣದ ಪ್ರಶ್ನೆ. ಕೊರೊನಾದಿಂದ ಜನರು ಪ್ರಾಣ ಭಯದಿಂದ ನಡುಗುತ್ತಿದ್ದರೆ, ಇನ್ನೊಂದೆಡೆ ಆಕ್ಸಿಜನ್ ಸಿಲಿಂಡರ್, ಔಷಧಗಳ ಹೆಸರಿನಲ್ಲಿ ಜನರ ಪ್ರಾಣ ಹಿಂಡಲಾಗುತ್ತಿದೆ ತಮಿಳುನಾಡಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ರೆಮ್ಡೆಸಿವಿರ್ ಔಷಧಿಯನ್ನು ನೀಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಕೊರೊನಾ ಸಂಕಟದ ನಡುವೆ ರೆಮ್ಡೆಸಿವಿರ್ ಗೆ ಬೇಡಿಕೆ ಹೆಚ್ಚುತ್ತಿದ್ದು, ಇದೇ ಸಂದರ್ಭದಲ್ಲಿ ಅವಧಿ ಮೀರಿದ ರೆಮ್ಡೆಸಿವಿರ್ ನ್ನು ರೋಗಿಗಳಿಗೆ ನೀಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಔಷಧದ ಬಾಟಲಿಯ ಹೊರ ಭಾಗಕ್ಕೆ ಹೊಸ ಲೇಬಲ್ ಅಂಟಿಸಿ, ಅವಧಿ ಮುಗಿದ ದಿನಾಂಕವನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ರೋಗಿಗಳ ಪ್ರಾಣದ ಜೊತೆಗೆ ಸರ್ಕಾರ ಹಾಗೂ ಆಸ್ಪತ್ರೆಗಳು ಆಟವಾಡುತ್ತಿವೆ.