ಅವನಿಗೆ ನನ್ನ ದೃಷ್ಟಿಯೇ ತಾಗಿತೇನೋ… | ಕಣ್ಣೀರು ಹಾಕುತ್ತಲೇ ಮಾತನಾಡಿದ ನಟ ಶಿವರಾಜ್ ಕುಮಾರ್ - Mahanayaka
2:21 PM Thursday 12 - December 2024

ಅವನಿಗೆ ನನ್ನ ದೃಷ್ಟಿಯೇ ತಾಗಿತೇನೋ… | ಕಣ್ಣೀರು ಹಾಕುತ್ತಲೇ ಮಾತನಾಡಿದ ನಟ ಶಿವರಾಜ್ ಕುಮಾರ್

shivaraj kumar
16/11/2021

ಬೆಂಗಳೂರು: ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಅವರು ಮಾತನಾಡುತ್ತಲೇ ದುಃಖಕ್ಕೆ ಜಾರಿದರು. ಕೊನೆಗೆ ಅವರು ಕಣ್ಣೀರು ಹಾಕುತ್ತಲೇ ಮಾತು ಮುಂದುವರಿಸಿದ ಘಟನೆ ನಡೆದಿದೆ.

ಮಾತಾಡೋಕೆ ತುಂಬಾನೆ ಕಷ್ಟವಾಗುತ್ತಿದೆ. ಎಲ್ಲರೂ ಅವನ ಬಗ್ಗೆನೇ ಮಾತನಾಡುತ್ತಿದ್ದಾರೆ. ಅವನ ಬಗ್ಗೆ ಮಾತನಾಡಲು ಏನೂ ಉಳಿದಿಲ್ಲ. ಅವನ ಬಗ್ಗೆ ಮಾತನಾಡಿ, ಮಾತನಾಡಿ ನನ್ನ ದೃಷ್ಟಿಯೇ ಅವನಿಗೆ ಬಿದ್ದು ಹೋಯ್ತೇನೋ ಅನ್ನಿಸುತ್ತದೆ ಎಂದು ಶಿವರಾಜ್ ಕುಮಾರ್ ಭಾವುಕರಾದರು.

ನನಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಆದರೆ, ಪುನೀತ್ ನಿಂದ ಸ್ಫೂರ್ತಿ ತೆಗೆದುಕೊಂಡೆ. ಶಿವಣ್ಣ ನನ್ನ ಸ್ಫೂರ್ತಿ ಅಂತ ಅಪ್ಪು ಹೇಳ್ತಾನೆ. ಆದರೆ, ಅದು ಅವನ ದೊಡ್ಡ ಗುಣ ಅಷ್ಟೆ ಎಂದು ಶಿವರಾಜ್ ಕುಮಾರ್ ಕಣ್ಣೀರು ಹಾಕಿದರು.

ಸಾಮಾಜಿಕ ಕೆಲಸಗಳನ್ನು ಇಷ್ಟೊಂದು ಮಾಡಿದ್ದಾನೆ. ನನ್ನ ಹತ್ತಿರ ಕಾರು ತಗೋ ಅಂತಿದ್ದ. ನನ್ನ ತಮ್ಮ ರಾಯಲ್ ಆಗಿ ಹುಟ್ಟಿದ್ದಾನೆ. ರಾಯಲ್ ಆಗಿ ಇರ್ತಾನೆ ಅಂತ ಹೇಳ್ತಿದ್ದೆ. ದೇವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಅವರು ಬೇಸರಿಸಿದರು.

ಇನ್ನು ಮುಂದೆ ಅವನನ್ನು ಜೀವಂತವಾಗಿರಿಸಿಕೊಳ್ಳೋಕೆ ಪ್ರಯತ್ನ ಮಾಡಬೇಕು. ಅವನಿಗೆ ದೀಪ ಹಚ್ಚೋದು ನನಗೆ ಇಷ್ಟವಿಲ್ಲ. ಜಾಸ್ತಿ ಮಾತು ಬೇಡ. ನಾನು ಹಾಗೂ ರಾಘು ಅತ್ತಿದ್ದು ನೋಡಿದ್ರೆ ಅಪ್ಪು ತುಂಬಾನೆ ಬೇಸರ ವ್ಯಕ್ತಪಡಿಸುತ್ತಿದ್ದ. ಒಂದು ದಿನ ಎಲ್ಲರೂ ಹೋಗಬೇಕು. ಆದರೆ ಇಷ್ಟು ಬೇಗ ಹೋಗಬೇಕಿತ್ತಾ? ಎಂದು ಬೇಸರ ವ್ಯಕ್ತಪಡಿಸಿದ ಅವರು,  ಕರ್ನಾಟಕದ ಜನತೆ ತೋರುತ್ತಿರುವ ಪ್ರೀತಿ ನೋಡಿದ್ರೆ ಖುಷಿ ಆಗುತ್ತಿದೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಬಿಟ್ ಕಾಯಿನ್  ಪ್ರಮುಖ ಆರೋಪಿ  ಶ್ರೀಕಿಯ ಎನ್ ಕೌಂಟರ್ ಸಾಧ್ಯತೆ?

ಅಪಘಾತದಲ್ಲಿ ಮೃತಪಟ್ಟ ಪುನೀತ್ ಅಭಿಮಾನಿ ಕೊನೆಯ ಕ್ಷಣದಲ್ಲಿ ಪತ್ನಿಗೆ ಹೇಳಿದ ಮಾತು ಕಣ್ಣೀರು ತರಿಸುತ್ತದೆ!

ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: 14 ರಾಜ್ಯಗಳ 76 ಸ್ಥಳಗಳಲ್ಲಿ ಜಾಲಾಡಿದ ಸಿಬಿಐ

ಪ್ರತಾಪ್ ಸಿಂಹ ಹೆಣ್ಣೋ ಗಂಡೋ ಎಂದು ನೋಡಿಕೊಳ್ಳಲಿ | ಇಕ್ಬಾಲ್ ಅನ್ಸಾರಿ ತಿರುಗೇಟು

ಇತ್ತೀಚಿನ ಸುದ್ದಿ