ಅಯೋಧ್ಯೆ ರಾಮಮಂದಿರ ವಿಗ್ರಹ ಪ್ರತಿಷ್ಟಾಪನೆಗೆ ಮೋದಿಗೆ ಆಹ್ವಾನ ಸಾಧ್ಯತೆ
ಅಯೋಧ್ಯೆಯ ರಾಮಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಸಾಧ್ಯತೆ ಇದೆ. ವಿಗ್ರಹ ಪ್ರತಿಷ್ಠಾಪನೆಗೆ ಬೇಕಾದ ಸಿದ್ಧತೆಗಳು ನಡೆಯುತ್ತಿರುವುದಾಗಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಮಮಂದಿರ ಟ್ರಸ್ಟ್ ಆಹ್ವಾನಿಸುವ ಸಾಧ್ಯತೆ ಇದೆ ಎಂದೂ ಇಂಡಿಯಾ ಟುಡೇ ವರದಿ ತಿಳಿಸಿದೆ.
ಡಿಸೆಂಬರ್ ಮತ್ತು ಜನವರಿಯ ನಡುವೆ ಪ್ರಧಾನಿಯವರಿಗೆ ಅನುಕೂಲಕರ ದಿನಾಂಕವನ್ನು ನೋಡಿಕೊಂಡು ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ವಿಗ್ರಹ ಪ್ರತಿಷ್ಠಾಪನೆಯ ಜೊತೆಗೆ ಅಯೋಧ್ಯೆಯಲ್ಲಿ ಏಳು ದಿನಗಳ ಉತ್ಸವ ಕೂಡ ನಡೆಯಲಿಕ್ಕಿದೆ.
ಡಿಸೆಂಬರ್ ನಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಸಲಾಗುವುದು ಮತ್ತು 2024 ಜನವರಿಯಲ್ಲಿ ರಾಮ ಮಂದಿರವನ್ನು ಸಾರ್ವಜನಿಕರಿಗೆ ತೆರೆದು ಕೊಡಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಜನರಲ್ ಸೆಕ್ರೆಟರಿ ಚಂಬತ್ ರಾಯ್ ಹೇಳಿದ್ದಾರೆ.
ರಾಮಮಂದಿರವನ್ನು ಯಾವಾಗ ಉದ್ಘಾಟನೆ ಮಾಡಬೇಕು ಎಂಬುದನ್ನು ಈವರೆಗೂ ಚರ್ಚೆ ಮಾಡಿಲ್ಲ. ಮಂದಿರದ ನಿರ್ಮಾಣ ಬಹಳ ವೇಗವಾಗಿ ನಡೆಯುತ್ತಿದೆ, ಡಿಸೆಂಬರ್ 31 ಮತ್ತು ಜನವರಿ 15ರ ಒಳಗೆ ಯಾವ ಸಂದರ್ಭದಲ್ಲಿಯೂ ಮಂದಿರದ ಉದ್ಘಾಟನೆ ನಡೆಯಬಹುದು ಎಂದು ಆವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw