ಅಯೋಧ್ಯೆಯಲ್ಲಿ ಬ್ರಾಹ್ಮಣರ ಸಮ್ಮೇಳನ ಆಯೋಜಿಸಿದ ಬಿಎಸ್ ಪಿ! - Mahanayaka
1:14 AM Wednesday 11 - December 2024

ಅಯೋಧ್ಯೆಯಲ್ಲಿ ಬ್ರಾಹ್ಮಣರ ಸಮ್ಮೇಳನ ಆಯೋಜಿಸಿದ ಬಿಎಸ್ ಪಿ!

mayawati
18/07/2021

ಲಕ್ನೋ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ)ಯು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜುಲೈ 23ರಂದು  ಬ್ರಾಹ್ಮಣರ ಸಮ್ಮೇಳನವನ್ನು ಆಯೋಜಿಸುತ್ತಿದ್ದು, ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಮಿಶ್ರಾ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಇಂದು ಸುದ್ದಿಗಾರರಿಗೆ ಈ ವಿಚಾರ ತಿಳಿಸಿರುವ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ,  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂಬ ಹೆಚ್ಚಿನ ವಿಶ್ವಾಸವಿದೆ.  ಬ್ರಾಹ್ಮಣ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಜುಲೈ 23 ರಂದು ಅಯೋಧ್ಯೆಯಿಂದ ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಮಿಶ್ರಾ ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು, ಬಿಎಸ್ ಪಿ ಆಡಳಿತದಲ್ಲಿ ಮಾತ್ರ ಬ್ರಾಹ್ಮಣರ ಹಿತಾಸಕ್ತಿ ಸುಭದ್ರ ಎಂಬ ಭರವಸೆ ಮೂಡಿಸಲಾಗುವುದು ಎಂದು ಅವರು ತಿಳಿಸಿದರು ಎಂದು ವರದಿಯಾಗಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದೇಶ ಹಾಗೂ ಜನರಿಗೆ ಪ್ರಯೋಜನಕಾರಿಯಾದ ವಿಷಯಗಳ ಬಗ್ಗೆ ಧ್ವನಿ ಎತ್ತುವಂತೆ ಬಿಎಸ್ ಪಿ ಪಕ್ಷದ ಸಂಸದರಿಗೆ ನಿರ್ದೇಶನ ನೀಡಲಾಗಿದೆ. ದೇಶದ ಜನರು ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆಯನ್ನು ಬಯಸುವ ಅನೇಕ ವಿಷಯಗಳಿವೆ ಎಂದು ಮಾಯವತಿ  ಇದೇ ಸಂದರ್ಭ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು:

ರಾಜಕೀಯಕ್ಕೆ ಕಾಲಿಡುತ್ತಾರಾ ರವಿ ಡಿ.ಚೆನ್ನಣ್ಣನವರ್? | ಏನಿದು ಹೊಸ ಚರ್ಚೆ?

ದೇಶ ಹಾಳು ಮಾಡಿದವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ | ನಾಲಿಗೆ ಹರಿಯಬಿಟ್ಟ ನಾರಾಯಣಾಚಾರ್ಯ!

ಬ್ರಾಹ್ಮಣ, ಸಂಸ್ಕೃತ, ವೇದ, ಉಪನಿಷತ್ ಗಳ ಅವಹೇಳನ ಭಾರತೀಯರ ನಾಶಕ್ಕೆ ಮುಹೂರ್ತ ಇಟ್ಟ ಹಾಗೆ | ನಾರಾಯಣಾಚಾರ್ಯ

ಜನಸಂಖ್ಯೆ ನಿಯಂತ್ರಿಸಲು ಮುಂದಿನ 20 ವರ್ಷ ವಿವಾಹವನ್ನೇ ನಿಷೇಧಿಸಿ: ಯೋಗಿಗೆ ತಿರುಗೇಟು ನೀಡಿದ ಸಂಸದ

ಇತ್ತೀಚಿನ ಸುದ್ದಿ