ಭಾರತದ ಈ ಮದ್ದಿನ ಮುಂದೆ ಕೊರೊನಾ ವೈರಸ್ ನ  ಆಟ ನಡೆಯಲ್ವಂತೆ - Mahanayaka

ಭಾರತದ ಈ ಮದ್ದಿನ ಮುಂದೆ ಕೊರೊನಾ ವೈರಸ್ ನ  ಆಟ ನಡೆಯಲ್ವಂತೆ

02/11/2020

ನವದೆಹಲಿ: “ಹಿತ್ತಲ ಗಿಡ ಮದ್ದಲ್ಲ” ಎಂಬ ಗಾದೆ ಮಾತು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ವಾಸ್ತವವಾಗಿದೆ. ಕೊರೊನಾ ಇಡೀ ವಿಶ್ವನ್ನೇ ಕಂಗೆಡಿಸಿದ ಸಂದರ್ಭದಲ್ಲಿ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೂ ಸಾವಿನ ಸಂಖ್ಯೆ ಕಡಿಮೆ ಇತ್ತು. ಇದಕ್ಕೆ ಇಲ್ಲಿನ ಆಹಾರ ಪದ್ಧತಿಗಳೇ ಕಾರಣ ಎಂದೇ ಹೇಳಲಾಗುತ್ತಿತ್ತು. ಕೊರೊನಾವನ್ನು ಹೊಡೆದೋಡಿಸುವ ಮದ್ದುಗಳು ನಮ್ಮ ನೆಲದಲ್ಲೇ ಇದ್ದರೂ ನಾವು ಬೇರೆ ದೇಶದಿಂದ ಬರುವ ಲಸಿಕೆಗಾಗಿ ಕಾದು ಕುಳಿತಿದ್ದೇವೆ,




 

ಹೌದು..! ಕೊರೊನಾ ಸೋಂಕು ತಡೆಗೆ ಆಯುರ್ವೇದಿಕ್ ಔಷಧಿಗಳು ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನುವುದು ಪ್ರಯೋಗಗಳಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ. ಈ ಬಗ್ಗೆ ದೆಹಲಿಯಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.


ಆರಂಭಿಕ ಹಂತ, ಗಂಭೀರವಲ್ಲದ ಕೊರೋನಾ ಸೋಂಕಿತ ಪ್ರಕರಣಗಳಲ್ಲಿ ಆಯುರ್ವೇದ ಚಿಕಿತ್ಸಾ ವಿಧಾನ ಪರಿಣಾಮಕಾರಿಯಾಗಿದೆ. ದೆಹಲಿಯ ಅಖಿಲ ಭಾರತ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆ ವೈದ್ಯರ ತಂಡ ಈ ಬಗ್ಗೆ ಮಾಹಿತಿ ನೀಡಿದೆ.


ಭಾರತದಲ್ಲಿ ಬೌದ್ಧರ ಕಾಲದಲ್ಲಿ ಆರಂಭವಾದ ಪ್ರಕೃತಿ ಚಿಕಿತ್ಸೆ, ಈಗಲೂ ಬೇರೆ ಬೇರೆ ರೂಪ ಪಡೆದುಕೊಂಡು ಕಾರ್ಯಾಚರಿಸುತ್ತಿದೆ. ಇಂತಹ ನಮ್ಮ ನೆಲದಲ್ಲಿರುವ ಮದ್ದುಗಳನ್ನೇ ಬಳಸಿಕೊಂಡು ಕೊರೊನಾದಂತಹ ರೋಗವನ್ನು ಎಲ್ಲಿಂದ ಬಂದಿದೆಯೋ ಅಲ್ಲಿಗೆ ಓಡಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ.


ಇತ್ತೀಚಿನ ಸುದ್ದಿ