ಆನ್‌ ಲೈನ್ ಸ್ಕ್ಯಾಮ್‌ ಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮೆಟಾ ಜೊತೆ ಕೈ ಜೋಡಿಸಿದ ಆಯುಷ್ಮಾನ್ ಖುರಾನಾ - Mahanayaka
6:05 PM Thursday 12 - December 2024

ಆನ್‌ ಲೈನ್ ಸ್ಕ್ಯಾಮ್‌ ಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮೆಟಾ ಜೊತೆ ಕೈ ಜೋಡಿಸಿದ ಆಯುಷ್ಮಾನ್ ಖುರಾನಾ

meta
14/10/2024

ಭಾರತ: ಮೆಟಾ ಸಂಸ್ಥೆಯು ‘ಸ್ಕ್ಯಾಮ್ಸ್ ಸೆ ಬಚೋ’ (ಸ್ಕ್ಯಾಮ್ ಗಳಿಂದ ತಪ್ಪಿಕೊಳ್ಳಿ) ಎಂಬ ತನ್ನ ಸುರಕ್ಷತಾ ಅಭಿಯಾನವನ್ನು ಇಂದು ಆರಂಭಿಸಿದೆ. ಇದೇ ಸಂದರ್ಭದಲ್ಲಿ ಆನ್‌ ಲೈನ್ ಸ್ಕ್ಯಾಮ್‌ ಗಳಿಂದ ಸುರಕ್ಷಿತವಾಗಿರಲು ಹಾಗೂ ಸುರಕ್ಷಿತ ರೀತಿಯಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಲು ಬಾಲಿವುಡ್ ಸ್ಟಾರ್ ಆಯುಷ್ಮಾನ್ ಖುರಾನಾ ಅವರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ), ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) ಗಳ ಸಹಯೋಗದೊಂದಿಗೆ ಈ ಸುರಕ್ಷತಾ ಅಭಿಯಾನವನ್ನು ಆಯೋಜಿಸಲಾಗಿದ್ದು, ಈ ಅಭಿಮಾನವು ದೇಶದಲ್ಲಿ ಹೆಚ್ಚುತ್ತಿರುವ ಸ್ಕ್ಯಾಮ್ ಗಳು ಮತ್ತು ಸೈಬರ್ ವಂಚನೆಗಳ ಜಾಗೃತಿ ಮೂಡಿಸುವ ಸರ್ಕಾರದ ಉದ್ದೇಶದ ಭಾಗವಾಗಿ ಆನ್‌ಲೈನ್‌ ನಲ್ಲಿ ಜನರಿಗೆ ರಕ್ಷಣೆ ಒದಗಿಸುವ ಮೆಟಾ ಕಂಪನಿಯ ಬದ್ಧತೆಯನ್ನು ಸೂಚಿಸುತ್ತದೆ.

ಈ ಶಿಕ್ಷಣ ಒದಗಿಸುವ ಅಭಿಯಾನದಲ್ಲಿ ಜನರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಕೆಲವು ಸಾಮಾನ್ಯ ಸ್ಕ್ಯಾಮ್ ಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಂಥಾ ಸ್ಕ್ಯಾಮ್ ಸಂದರ್ಭದಲ್ಲಿ ಜನರು ಯಾವುದೇ ಹೆಜ್ಜೆ ಇಡುವ ಜಾಗರೂಕರಾಗಿರಲು ಮತ್ತು ಎಚ್ಚರಿಕೆಯಿಂದ ಮುಂದುವರಿಯಲು ಈ ಅಭಿಯಾನದ ಮೂಲಕ ತಿಳಿಸಲಾಗುತ್ತದೆ. ಆಯುಷ್ಮಾನ್ ಖುರಾನ ನಟಿಸಿರುವ ಈ ಅರಿವು ಮೂಡಿಸುವ ಜಾಹೀರಾತು ಚಿತ್ರವು ಗ್ರಾಹಕರು ಆನ್ ಲೈನ್ ನಲ್ಲ ಸುರಕ್ಷಿತವಾಗಿರಲು ಅನುವು ಮಾಡಿ ಕೊಡುವ ಫೇಸ್‌ ಬುಕ್, ಇನ್‌ ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿನ ಸುರಕ್ಷತಾ ಫೀಚರ್ ಗಳ ಕುರಿತು ವಿವರವಾಗಿ ತಿಳಿಸುತ್ತದೆ. ನೀವು ಪೂರ್ಣ ಚಲನಚಿತ್ರವನ್ನು ಇಲ್ಲಿ ನೋಡಬಹುದು: https://www.facebook.com/MetaIndia/videos/1082499483221216/

ಈ ಜಾಹೀರಾತು ಚಿತ್ರದಲ್ಲಿ, ಆಯುಷ್ಮಾನ್ ಖುರಾನಾ ವಿವಾಹ ಕಾರ್ಯಕ್ರಮವೊಂದರ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಅವರು ಸ್ಕ್ಯಾಮ್ ಗೆ ಬೀಳುವ ಸಾಧ್ಯತೆ ಇರುವವರನ್ನು ಎದುರುಗೊಂಡು ಅವರ ವಿಶಿಷ್ಟ ಆಲೋಚನೆ ಹಾಗೂ ಹಾಸ್ಯ ಸ್ವಭಾವದಿಂದ ಅವರನ್ನು ಸುರಕ್ಷಿತಗೊಳಿಸುತ್ತಾರೆ. ಈ ಜಾಹೀರಾತಿನಲ್ಲಿ ಮೆಟಾದ ಟೂ ಫ್ಯಾಕ್ಟರ್ ಅಥೆಂಟಿಕೇಷನ್, ಬ್ಲಾಕ್ ಆಂಡ್ ರಿಪೋರ್ಟ್, ವಾಟ್ಸ್ ಆಪ್ ನ ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ ನಂತಹ ಫೀಚರ್ ಗಳನ್ನು ತಿಳಿಸಲಾಗುತ್ತದೆ. ಈ ಜಾಹೀರಾತು ಮೆಟಾದ ಅಂತರ್ನಿರ್ಮಿತ ಫೀಚರ್ ಗಳು ಮತ್ತು ಸುರಕ್ಷತಾ ಸಾಧನಗಳು ಆನ್‌ ಲೈನ್ ಸ್ಕ್ಯಾಮ್ ಗಳು, ವಂಚನೆಗಳು ಮತ್ತು ಅಕೌಂಟ್ ಗಳ ಮಾಹಿತಿ ಕಳವಿನ ವಿರುದ್ಧ ಜನರನ್ನು ರಕ್ಷಿಸಲು ಸಹಾಯ ಮಾಡಲು ಹೇಗೆ ನೆರವಾಗುತ್ತದೆ ಮತ್ತು ಹೇಗೆ ಸುರಕ್ಷತೆ ಒದಗಿಸುತ್ತದೆ ಎಂಬುದನ್ನು ತಿಳಿಸಲಾಗಿದೆ.

ಈ ಅಭಿಯಾನದ ಕುರಿತು ಪ್ರತಿಕ್ರಿಯಿಸಿರುವ ನಟ ಆಯುಷ್ಮಾನ್ ಖುರಾನಾ ಅವರು , “ಇಂದಿನ ಡಿಜಿಟಲ್ ಯುದಲ್ಲಿ ಆನ್‌ ಲೈನ್ ಸ್ಕ್ಯಾಮ್ ಗಳು ಮತ್ತು ವಂಚನೆಗಳ ಪ್ರಕರಣ ಹೆಚ್ಚಾಗಿರುವುದು ಎಲ್ಲರ ಗಮನಕ್ಕೆ ಬಂದಿರುತ್ತದೆ. ಇಂಥಾ ಹೊತ್ತಲ್ಲಿ ನಾವು ಹೇಗೆ ಜಾಗರೂಕರಾಗಿರಬೇಕು ಮತ್ತು ಸುರಕ್ಷಿತವಾಗಿರುವುದು ಹೇಗೆ ಎಂಬುದರ ಕುರಿತು ನಮಗೆ ಶಿಕ್ಷಣ ಇರುವುದು ಬಹಳ ಮುಖ್ಯ. ಸಂಭಾವ್ಯ ಸೈಬರ್ ವಂಚನೆಗಳಿಂದ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿರುವ ಮೆಟಾದ ಸುರಕ್ಷತಾ ಅಭಿಯಾನದ ಭಾಗವಾಗಲು ನಾನು ಸಂತೋಷ ಹೊಂದಿದ್ದೇನೆ. ಡಿಜಿಟಲ್ ಜಗತ್ತಿನಲ್ಲಿ ನೀವು ಮುಂದೆ ಹೆಜ್ಜೆ ಇಡುವ ಮೊದಲು ಎರಡು ಬಾರಿ ಯೋಚಿಸುವುದು ಮತ್ತು ನಿಮ್ಮ ಕೆಲಸ ಮಾಡುವಾಗ ಮೆಟಾದ ಸುರಕ್ಷತಾ ಪರಿಕರಗಳನ್ನು ಬಳಸಲು ಈ ಜಾಹೀರಾತು ನಿಮಗೆ ಜಾಗೃತಿ ಮೂಡುತ್ತದೆ ಮತ್ತು ನೀವು ಆನ್‌ ಲೈನ್ ನಲ್ಲಿ ಸುರಕ್ಷಿತರಾಗಿರಲು ಪ್ರೇರೇಪಣೆ ನೀಡುತ್ತದೆ” ಎಂದು ಹೇಳಿದರು.

ಈ ಕುರಿತು ಮೆಟಾ ಇಂಡಿಯಾದ ಉಪಾಧ್ಯಕ್ಷ ಮತ್ತು ಪಬ್ಲಿಕ್ ಪಾಲಿಸಿ ವಿಭಾಗ ಮುಖ್ಯಸ್ಥ ಶಿವನಾಥ್ ತುಕ್ರಾಲ್ ಅವರು, “ನಾವು ಆನ್‌ ಲೈನ್ ಸ್ಕ್ಯಾಮ್ ಗಳ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದ್ದೇವೆ. ಈ ಸಮಸ್ಯೆಯನ್ನು ಎದುರಿಸಲು ಎಲ್ಲರೂ ಜೊತೆಯಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನಾವು ನಂಬುತ್ತೇವೆ. ವಂಚಕರಿಗಿಂತ ಮುಂಚೂಣಿಯಲ್ಲಿ ನಿಲ್ಲಲು ಮೆಟಾ ಸಂಸ್ಥೆಯು ತಂತ್ರಜ್ಞಾನ ಮತ್ತು ಸಂಪನ್ಮೂಲಗಳಲ್ಲಿ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ ಮತ್ತು ನಮ್ಮ ಸುರಕ್ಷತಾ ಅಭಿಯಾನವಾದ ‘ಸ್ಕ್ಯಾಮ್ಸ್ ಸೆ ಬಚೋ’ (ಸ್ಕ್ಯಾಮ್ ನಿಂದ ರಕ್ಷಿಸಿಕೊಳ್ಳಿ) ಮೂಲಕ ಬಳಕೆದಾರರಿಗೆ ತಮ್ಮ ಬೆರಳ ತುದಿಯಲ್ಲಿರುವ ಸುರಕ್ಷತಾ ಪರಿಕರಗಳು ಮತ್ತು ಫೀಚರ್ ಗಳನ್ನು ಬಳಸುವ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಈ ಅಭಿಯಾನವು ನಮ್ಮ ಗ್ರಾಹಕರಿಗೆ ಸುರಕ್ಷಿತರಾಗಿರಲು ನೆರವಾಗುವ ಮತ್ತು ಅವರು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸ್ನೇಹಿತರು ಮತ್ತು ಕುಟುಂಬವನ್ನು ರಕ್ಷಿಸುವ ಕುರಿತು ಜಾಗೃತಿ ಹೊಂದುವತೆ ಮಾಡುತ್ತದೆ ಎಂಬುದಾಗಿ ನಾವು ಭಾವಿಸುತ್ತೇವೆ”ಎಂದು ಹೇಳಿದರು.

ವೈಯಕ್ತಿಕ ಖಾತೆಗಳನ್ನು ಅನ್ಯರ ಕೈಗೆ ಒದಗಿಸುವ, ಗೌಪ್ಯ ಮಾಹಿತಿ ಕಳ್ಳತನಕ್ಕೆ ಒಳಗಾಗುವ, ಹಣಗಳನ್ನು ಕಳೆದುಕೊಳ್ಳುವ ಓಟಿಪಿ ಸ್ಕ್ಯಾಮ್‌ ಗಳಿಂದ ಹಿಡಿದು ಹಲವಾರು ರೀತಿಯ ವ್ಯಾಪಕ ಶ್ರೇಣಿಯ ಸ್ಕ್ಯಾಮ್‌ ಗಳ ಕುರಿತು ಈ ಜಾಹೀರಾತಿನಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಸ್ಕ್ಯಾಮ್ ಗಳ ಸಂದರ್ಭದಲ್ಲಿ ವಂಚಕರು ತುರ್ತು ಪರಿಸ್ಥಿತು ಎದುರಿಸುವಂತೆ ಮಾಡಿ ಹಣ ಕಳೆದುಕೊಳ್ಳುವಂತೆ ಮಾಡುತ್ತಾರೆ. ಈ ಸ್ಕ್ಯಾಮ್ ಗಳಲ್ಲಿ ಭಾರಿ ಆದಾಯ ಕೊಡುತ್ತೇವೆ ಎನ್ನಲಾಗುವ ಟ್ರೇಡಿಂಗ್ ಹಾಗೂ ಇನ್ ವೆಸ್ಟ್ ಮೆಂಟ್ ಸ್ಕ್ಯಾಮ್ ಗಳು, ಫೇಕ್ ಲೋನ್ ಆಪ್ ಗಳು ಕೂಡ ಸೇರಿವೆ. ಈ ಜಾಹೀರಾತು ಅಭಿಯಾನವು ಆನ್‌ ಲೈನ್ ಸ್ಕ್ಯಾಮ್ ಗಳು ಮತ್ತು ವಂಚನೆಗಳಿಂದ ಜನರು ಸುರಕ್ಷಿತರಾಗಿರಲು ಮೆಟಾದ ಸರಳ ಮತ್ತು ಪರಿಣಾಮಕಾರಿ ಸುರಕ್ಷತಾ ಫೀಚರ್ ಗಳು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ.

2016ರಿಂದಲೂ ಮೆಟಾ ಸಂಸ್ಥೆಯು ತಂಡಗಳು ಮತ್ತು ತಂತ್ರಜ್ಞಾನದ ಮೇಲೆ $20 ಶತಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಆ ಮೂಲಕ ಜಾಗತಿಕವಾಗಿ 40,000ಕ್ಕೂ ಹೆಚ್ಚು ಜನರು ಸುರಕ್ಷತೆ ಮತ್ತು ಭದ್ರತೆಗಾಗಿ ಕೆಲಸ ಮಾಡುತ್ತಿದ್ದಾರೆ. 20 ಭಾರತೀಯ ಭಾಷೆಗಳನ್ನು ಒಳಗೊಂಡಂತೆ 70ಕ್ಕೂ ಹೆಚ್ಚು ಭಾಷೆಗಳಲ್ಲಿ ಫೇಸ್ ಬುಕ್, ಇನ್ ಸ್ಟಾ ಗ್ರಾಮ್ ಮತ್ತು ಥ್ರೆಡ್‌ಗಳಾದ್ಯಂತ ಕಂಟೆಂಟ್ ಅನ್ನು ಪರಿಶೀಲಿಸುವ 15,000 ಕಂಟೆಂಟ್ ರಿವ್ಯೂವರ್ ಇದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಮೆಟಾ ಆನ್‌ಲೈನ್ ಸುರಕ್ಷತೆಯನ್ನು ಹೆಚ್ಚಿಸಲು 50ಕ್ಕೂ ಹೆಚ್ಚು ಸುರಕ್ಷತಾ ಸಾಧನಗಳು ಮತ್ತು ಫೀಚರ್ ಗಳನ್ನು ಒದಗಿಸುತ್ತಿದೆ ಮತ್ತು ನಾವು ಯಾವಾಗಲೂ ಆನ್‌ಲೈನ್ ಸುರಕ್ಷತೆಯ ಕುರಿತು ಗ್ರಾಹಕರಿಗೆ ಶಿಕ್ಷಣ ನೀಡಲು ಹೊಸ ಮಾರ್ಗಗಳನ್ನು ಹುಡುಕುತ್ತಿರುತ್ತೇವೆ. ಜೊತೆಗೆ ಸ್ಕ್ಯಾಮ್ ಕಂಟೆಂಟ್ ವಿರುದ್ಧ ನಮ್ಮ ವ್ಯವಸ್ಥೆಗಳನ್ನು ಬಲಪಡಿಸಲು ಹೊಸ ವಿಧಾನಗಳನ್ನು ಹುಡುಕುತ್ತಲೇ ಇದ್ದೇವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ