ನಾಚಿಕೆ ಆಗಬೇಕು ನಿಮ್ಮ ಸರ್ಕಾರಕ್ಕೆ, ಹಸಿರು ಶಾಲು ಹಾಕಿ ಮರ್ಯಾದೆ ತೆಗೆಯಬೇಡಿ | ಸಚಿವ ಬಿ.ಸಿ.ಪಾಟೀಲ್ ನ್ನು ತರಾಟೆಗೆತ್ತಿಕೊಂಡ ರೈತರು - Mahanayaka
4:14 PM Thursday 12 - December 2024

ನಾಚಿಕೆ ಆಗಬೇಕು ನಿಮ್ಮ ಸರ್ಕಾರಕ್ಕೆ, ಹಸಿರು ಶಾಲು ಹಾಕಿ ಮರ್ಯಾದೆ ತೆಗೆಯಬೇಡಿ | ಸಚಿವ ಬಿ.ಸಿ.ಪಾಟೀಲ್ ನ್ನು ತರಾಟೆಗೆತ್ತಿಕೊಂಡ ರೈತರು

19/01/2021

ಮೈಸೂರು: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ರೈತರು ತೀವ್ರವಾಗಿ ತರಾಟೆಗೆತ್ತಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದ್ದು, “ಹಸಿರು ಶಾಲು ಹಾಕಿಕೊಂಡು ರೈತರ ಮರ್ಯಾದೆ ಕಳೆಯ ಬೇಡಿ. ನಿಮ್ಮ ಸರ್ಕಾರಕ್ಕೆ ನಾಚಿಕೆಯಾಗಬೇಕು” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆ ಅಂತಾನೇ ಗೊತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ಪರಿಜ್ಞಾನವೂ ಇಲ್ಲ. ಜಿಲ್ಲಾಡಳಿತ ಕೇಳಿದರೆ ಸರ್ಕಾರ ಆದೇಶ ಮಾಡಬೇಕು ಅನ್ನುತ್ತೆ. ಆಡಳಿತ ನಡೆಸಲು ಗೊತ್ತಿಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ರೈತರು ನೇರಾನೇರವಾಗಿ ಬಿ.ಸಿ.ಪಾಟೀಲ್ ಅವರನ್ನು ತರಾಟಗೆತ್ತಿಕೊಂಡರು.

ಈ ವೇಳೆ ‘ನೀವು ಈ ರೀತಿಯಾಗಿ ಮಾತನಾಡಬಾರದು’ ಎಂದು ಬಿ.ಸಿ.ಪಾಟೀಲ್ ರೈತರಿಗೆ ಹೇಳುತ್ತಿದ್ದಂತೆಯೇ ಮತ್ತೆ ಆಕ್ರೋಶಿತರಾದ ರೈತರು,  ನೀವು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಕೈಮುಗಿದು ನಿಲ್ಲಬೇಕಾ, ನೀವೇನು ಆಕಾಶದಿಂದ ಧರೆಗಿಳಿದು ಬಂದಿದ್ದೀರಾ ಎಂದು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ