ಹಿಂದೂ ಧರ್ಮೀಯರ ಮೇಲಿನ ದಾಳಿ ವಿರುದ್ಧ ವಿಎಚ್ ಪಿ, ಬಜರಂಗದಳ ಪ್ರತಿಭಟನೆ - Mahanayaka
12:12 PM Thursday 12 - December 2024

ಹಿಂದೂ ಧರ್ಮೀಯರ ಮೇಲಿನ ದಾಳಿ ವಿರುದ್ಧ ವಿಎಚ್ ಪಿ, ಬಜರಂಗದಳ ಪ್ರತಿಭಟನೆ

vhp bajarangadal protest
20/10/2021

ಬಂಟ್ವಾಳ:  ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಧರ್ಮೀಯರ ಮೇಲೆ ನಡೆದ ದಾಳಿ ಕೃತ್ಯದ ವಿರುದ್ಧ ವಿಶ್ವ ಹಿಂದೂ ಪರಿಷತ್ (VHP) ಹಾಗೂ ಬಜರಂಗದಳ(Bajarangadal) ಬಂಟ್ವಾಳ ಪ್ರಖಂಡದ ವತಿಯಿಂದ ಬಿ.ಸಿ.ರೋಡ್ ನ ಮೇಲ್ಸೇತುವೆಯ ಕೆಳಗೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ VHP ಜಿಲ್ಲಾ ಸಂಚಾಲಕ ಅಶೋಕ ಶೆಟ್ಟಿ, ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ,ದೇವಸ್ಥಾನಗಳ ಮೇಲಿನ ದಾಳಿ, ಮನೆಗೆ ಬೆಂಕಿ ಹಚ್ಚುವಂತ ಕೃತ್ಯದಿಂದ ಹಿಂದೂಗಳ ಪಾಲಿಗೆ ನರಕ ಸದೃಶ್ಯವಾಗಿದ್ದು, ಬಾಂಗ್ಲಾ ಸರಕಾರ ಹಿಂದೂಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

ಆಚಾರ, ವಿಚಾರ, ಸಂಸ್ಕೃತಿಯಿಂದ ಹಿಂದೂ ರಾಷ್ಟ್ರವಾಗಿರುವ ಭಾರತದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮರುಕಳಿಸುತ್ತಿದ್ದು, ಇದನ್ನು ಎದುರಿಸಲು ಗ್ರಾಮ ಮಟ್ಟದಲ್ಲಿ ವಿಎಚ್ ಪಿ., ಬಜರಂಗದಳ ಸನ್ನದ್ದವಾಗಿದೆ ಎಂದು ಅವರು ಹೇಳಿದರು.

ಬಜರಂಗದಳದ ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ಪ್ರಖಂಡ ಸಂಚಾಲಕ ಶಿವಪ್ರಸಾದ್ ತುಂಬೆ, ಪ್ರಮುಖರಾದ ಸಂತೋಷ್ ಸರಪಾಡಿ, ದೀಪಕ್ ಅಜೆಕಳ, ವಿನೀತ್ ತುಂಬೆ, ಪ್ರಸಾದ್ ಬೆಂಜನಪದವು, ಪ್ರವೀಣ್ ಕುಂಟಾಲಪಲ್ಕೆ, ಹರೀಶ್ ಅಮ್ಟಾಡಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಅಫ್ಘಾನಿಸ್ತಾನ: ವಾಲಿಬಾಲ್ ಆಟಗಾರ್ತಿಯ ಶಿರಚ್ಚೇದನ ನಡೆಸಿದ ತಾಲಿಬಾನಿಗಳು

ಸಾರ್ವಜನಿಕ ಸ್ಥಳಗಳಲ್ಲಿ ತಲ್ವಾರ್ ಪ್ರದರ್ಶಿಸಿದ ಸಂಘ ಪರಿವಾರದ ವಿರುದ್ಧ ಪ್ರಕರಣ ದಾಖಲಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ

70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ವೃದ್ಧೆ

ನಿರ್ಲಜ್ಜ, ನೀಚ ರಾಜಕಾರಣಿಗಳ ಬದಲು ಹಿಂದೂ ಸಂಘಟನೆಗಳಿಗೆ ಬಲ ತುಂಬಿ: ಬಿಜೆಪಿ ವಿರುದ್ಧ ಮುತಾಲಿಕ್ ಪರೋಕ್ಷ  ಕಿಡಿ

“ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್” ಎಂಬ ನಳಿನ್ ಹೇಳಿಕೆ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ

ಐವನ್ ಡಿಸೋಜ ಮನೆಗೆ ನುಗ್ಗಲು ಬಜರಂಗದಳದ ಕಾರ್ಯಕರ್ತರಿಂದ ಯತ್ನ: 8 ಮಂದಿ ಅರೆಸ್ಟ್

65 ಸಾವಿರ ರೂ.ಗಳ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿ ಮೊರೆ ಹೋದ ದೃಷ್ಟಿಹೀನ ವಿಕಲಚೇತನ!

ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಂಕಷ್ಟ ಸಿಲುಕಿದ ಸಿಎಂ ಬಸವರಾಜ್ ಬೊಮ್ಮಾಯಿ

ಇತ್ತೀಚಿನ ಸುದ್ದಿ