ಉಗ್ರರ ಜೊತೆಗೆ ನಂಟು ವಿಚಾರ: ವಿ ಎಚ್ ಪಿ, ಬಜರಂಗದಳದಿಂದ ಬಿ.ಎಂ.ಬಾಷಾ ಮನೆಗೆ ಮುತ್ತಿಗೆ!
ಮಂಗಳೂರು: ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಎನ್ ಐಎ, ಮಾಜಿ ಶಾಸಕ ಇದಿನಬ್ಬ ಅವರ ಪುತ್ರ ಬಿ.ಎಂ.ಬಾಷಾನನ್ನು ಬಂಧಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಎನ್ ಐ ಎ ದಾಳಿ ನಡೆಸಿದ ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ.ಬಾಷಾ ಮನೆಗೆ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ವಿಶ್ವ ಹಿಂದೂ ಷರಿಷತ್ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಳ್ಳಾಲದಾದ್ಯಂತ ಬ್ಯಾನ್ ಟೆರರಿಸಂ ಎನ್ನುವ ಪೋಸ್ಟ್ ಕಾರ್ಡ್ ಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇನ್ನೂ ಬಿ.ಎಂ.ಬಾಷಾ ಮನೆಗೆ ನುಗ್ಗಲು ಯತ್ನಿಸಿದ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿ.ಎಂ ಬಾಷಾ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದಾನೆ ಎಂಬ ವಿಚಾರ ಹಾಗೂ ಹಿಂದೂ ಕುಟುಂಬದ ಯುವತಿಯೊಬ್ಬಳು ಮತಾಂತರಗೊಂಡು ಸಿರಿಯಾ ದೇಶಕ್ಕೆ ತೆರಳಿ, ಉಗ್ರರ ಜೊತೆಗೆ ಸಂಪರ್ಕದಲ್ಲಿದ್ದಾಳೆ ಎಂದು ಆರೋಪಿಸಿ ತೀವ್ರ ಪ್ರತಿಭಟನೆ ನಡೆಸಲಾಗಿದ್ದು, ಪೋಸ್ಟ್ ಕಾರ್ಡ್ ಗಳನ್ನು ಪ್ರದರ್ಶಿಸಲಾಗಿದೆ.
ತಲಪಾಡಿ, ಕೋಟೆಕಾರು, ಬೀರಿ, ತೊಕ್ಕೊಟ್ಟು, ಮುಡಿಪು, ನೇತ್ರಾವತಿ ಸೇತುವೆ, ಕಲ್ಲಾಪು, ಕೊಣಾಜೆ ಸಹಿತ ವಿವಿದೆಡೆ ಹಿಂದೂ ಕಾರ್ಯಕರ್ತರು ಈ ಘಟನೆಗಳನ್ನು ಪ್ರಸ್ತಾಪಿಸಿ ಜನಜಾಗೃತಿ ಆಂದೋಲನ ಹಮ್ಮಿಕೊಂಡರು.
ಇನ್ನಷ್ಟು ಸುದ್ದಿಗಳು…
ಕಾಂಗ್ರೆಸ್ ನವರು ಕುಡುಕ ಸೂ*** ಮಕ್ಕಳು ಎಂದು ಹೇಳಿಕೆ ನೀಡಿದ ಸಚಿವ ಈಶ್ವರಪ್ಪ
ಭೀಕರ ಅಪಘಾತ: ಲಾರಿಯಡಿಗೆ ಬಿದ್ದು ಸ್ಕೂಟರ್ ಸವಾರನ ದೇಹ ಛಿದ್ರಛಿದ್ರ | ಬೆಚ್ಚಿ ಬಿದ್ದ ಜನರು
ದೇವಸ್ಥಾನದಿಂದ ಬರುತ್ತಿದ್ದ ಮಹಿಳೆಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ!
ಮೊಘಲರ ಆಳ್ವಿಕೆಯ 600 ವರ್ಷಗಳ ಕಾಲ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರು | ಸಿದ್ದರಾಮಯ್ಯ
ಕರಾಟೆ ಬೆಲ್ಟ್ ನಿಂದ ತಾಯಿಯ ಕತ್ತು ಹಿಸುಕಿ ಕೊಂದ ಬಾಲಕಿ!
ಹೂಗುಚ್ಛ, ಹಾರ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ | ಕನ್ನಡ ಪುಸ್ತಕ ಕೊಡಲು ಆದೇಶ