ಉದ್ಯಮಿ ಬಿ.ಆರ್.ಶೆಟ್ಟಿ ಮುಟ್ಟುಗೋಲು ಹಾಕಲು ನ್ಯಾಯಾಲಯ ಆದೇಶ - Mahanayaka
10:14 PM Thursday 12 - December 2024

ಉದ್ಯಮಿ ಬಿ.ಆರ್.ಶೆಟ್ಟಿ ಮುಟ್ಟುಗೋಲು ಹಾಕಲು ನ್ಯಾಯಾಲಯ ಆದೇಶ

17/02/2021

ಲಂಡನ್: ಎನ್‌ ಎಂಸಿ ಹೆಲ್ತ್‌ ನ ಸಂಸ್ಥಾಪಕ ಬಿ.ಆರ್.ಶೆಟ್ಟಿಯವರ ಆಸ್ತಿಯನ್ನು ಯುಕೆ ನ್ಯಾಯಾಲಯವು ಮುಟ್ಟುಗೋಲು ಹಾಕಲು ಆದೇಶ ನೀಡಿದೆ.

ಎನ್‌ ಎಂಸಿ ಹೆಲ್ತ್‌ ಕೇರ್‌ ನ ಮಾಜಿ ಮಾಲಿಕ ಬಿ.ಆರ್‌ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್‌ ಮುಹೈರಿ ಹಾಗೂ ಸಯೀದ್ ಅಲ್‌ ಖುಬೈಸಿ, ಮಾಜಿ ಕಾರ್ಯ ನಿರ್ವಾಹಕ ಪ್ರಶಾಂತ್‌ ಮಂಗತ್‌ ಮತ್ತು ಇನ್ನಿಬ್ಬರು ಹಿರಿಯ ಅಧಿಕಾರಿಗಳ ಆಸ್ತಿಗಳ ಮುಟ್ಟುಗೋಲು ಹಾಕಲು ನ್ಯಾಯಾಲಯ ಆದೇಶಿಸಿದೆ.

ಲಂಡನ್ ನ್ಯಾಯಾಲಯದ ಈ ಆದೇಶದಿಂದ ಕೇರಳ ಹಾಗೂ ವಿಶ್ವದ ನಾನಾ ಭಾಗಗಳಲ್ಲಿರುವ ಬಿ.ಆರ್.ಶೆಟ್ಟಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ