ಬಾವಿಗೆ ಬಿದ್ದು ಬಾಲಕಿ ಸಾವು: ತಾಯಿ ವಿರುದ್ಧ ತಂದೆಯಿಂದಲೇ ಕೊಲೆ ಆರೋಪ - Mahanayaka
9:05 PM Wednesday 11 - December 2024

ಬಾವಿಗೆ ಬಿದ್ದು ಬಾಲಕಿ ಸಾವು: ತಾಯಿ ವಿರುದ್ಧ ತಂದೆಯಿಂದಲೇ ಕೊಲೆ ಆರೋಪ

rushmitha
16/02/2022

ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶಾಮರಾವ್ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.

ರುಷ್ಮಿತಾ(10) ಮೃತ ಬಾಲಕಿ. ನಿನ್ನೆ ಸಂಜೆ ಶಾಲೆಯಿಂದ ಬಂದ ರುಷ್ಮಿತಾ ಮನೆಯ ಪಕ್ಕದಲ್ಲೇ ಇರುವ ಜಮೀನು ಬಳಿ ತೆರಳಿದ್ದು, ಈ ವೇಳೆ ಜಮೀನಿನಲ್ಲಿರುವ ಬಾವಿಯಲ್ಲಿ ಬಿದ್ದಿದ್ದಾಳೆ. ರುಷ್ಮಿತಾ ಕಾಣಿಸುತ್ತಿಲ್ಲ ಎಂದು ಹುಡುಕಾಡಿದಾಗ ಬಾವಿಯ ಬಳಿ ಬಾಲಕಿಯ ಚಪ್ಪಲಿಯೊಂದು ಪತ್ತೆಯಾಗಿದ್ದು, ಬಾವಿಯಲ್ಲಿ ಶೋಧ ನಡೆಸಿದಾಗ ರುಷ್ಮಿತಾಳ ಮೃತದೇಹ ಪತ್ತೆಯಾಗಿದೆ.

ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ರುಷ್ಮಿತಾಳ ಮೃತದೇಹವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ರುಷ್ಮಿತಾಳ ತಾಯಿ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನುಮಾನಸ್ಪದ ಅಸಹಜ ಸಾವು ಎಂಬ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಮಧ್ಯೆ ರುಷ್ಮಿತಾಳ ತಂದೆ ಮಂಜುನಾಥ್ ಇದು ಆಕಸ್ಮಿಕ ಸಾವಲ್ಲ, ಉದ್ದೇಶಪೂರ್ವಕವಾಗಿಯೇ ತಾಯಿಯೇ ಕೊಲೆ ಮಾಡಿದ್ದಾಳೆ ಅಂತ ಆರೋಪಿಸಿ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯನ್ನು ಅಟ್ಟಾಡಿಸಿ ವಿಡಿಯೋ ಮಾಡಿದ ಪತ್ರಕರ್ತ!

ವಿದೇಶಿ ಮಹಿಳೆಯಿಂದ ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿತ

ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು

ಕಾರಾಗೃಹದಲ್ಲಿ ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಖೈದಿ

ಇತ್ತೀಚಿನ ಸುದ್ದಿ