ಕೆಎಸ್ಸಾರ್ಟಿಸಿಗೆ  “ಬಾಬಾಸಾಹೇಬ್ ಸಾರಿಗೆ ಸಂಸ್ಥೆ” ಎಂದು ಹೆಸರಿಡಲು ಸಂಸದೆ ಸುಮಲತಾ ಮನವಿ - Mahanayaka
7:00 AM Saturday 14 - December 2024

ಕೆಎಸ್ಸಾರ್ಟಿಸಿಗೆ  “ಬಾಬಾಸಾಹೇಬ್ ಸಾರಿಗೆ ಸಂಸ್ಥೆ” ಎಂದು ಹೆಸರಿಡಲು ಸಂಸದೆ ಸುಮಲತಾ ಮನವಿ

baba saheb sarige samsthe
03/06/2021

ಬೆಂಗಳೂರು:  ಕರ್ನಾಟಕ ಇನ್ನು ಮುಂದೆ ಕೆಎಸ್ಸಾರ್ಟಿಸಿ ಹೆಸರು ಬಳಸುವಂತಿಲ್ಲ. ಕೆಎಸ್ಸಾರ್ಟಿಸಿ ಹೆಸರು ಕೇರಳದ ಪಾಲಾಗಿದೆ. ಇದೇ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿಗೆ ಹೊಸ ಹೊಸ ಹೆಸರು ಇಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗುತ್ತಿದೆ. ಇದೇ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅವರು ಕೂಡ ಒಂದು ಹೆಸರನ್ನು ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯದ ಮೂಲೆಮೂಲೆಗೂ ತಲುಪಿ ಪ್ರಯಾಣಿಕರನ್ನು ಒಂದು ಮೂಲೆಯಿಂದ ಇನ್ನೊಂದು ಕಡೆಗೆ  ತಲುಪಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ ಆರ್ ಟಿಸಿ)ದ ಬಸ್ ಗಳ  ಟ್ರೇಡ್ ಮಾರ್ಕ್  27 ವರ್ಷಗಳ ಕಾನೂನು ಹೋರಾಟದ ನಂತರ ಕೇರಳದ ಪಾಲಾಗಿದೆ. ಈ ಹಿನ್ನೆಲೆಯಲ್ಲಿ  ಕೆಎಸ್ಸಾರ್ಟಿಸಿ ಬಸ್ ಗೆ ಅಂಬೇಡ್ಕರ್ ಅವರ ಹೆಸರನ್ನು ಇಡಬೇಕು ಎಂದು ಅವರು  ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಪತ್ರಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನಪಿನಾರ್ಥ “ಬಾಬಾಸಾಹೇಬ್ ಸಾರಿಗೆ ಸಂಸ್ಥೆ” ಎಂದು ಕೆಎಸ್ಸಾರ್ಟಿಸಿಗೆ ಮರುನಾಮಕರಣ ಮಾಡುವಂತೆ ಸುಮಲತಾ ಕೋರಿದ್ದಾರೆ ಎನ್ನುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

sumalatha

ವೈರಲ್ ಆಗಿರುವ ಪತ್ರ

ಇತ್ತೀಚಿನ ಸುದ್ದಿ