ಬಾಬಾ ಸಿದ್ದೀಕಿ ಸಾವನ್ನು ಖಚಿತಪಡಿಸಲು ಆಸ್ಪತ್ರೆಯ ಬಳಿ 30 ನಿಮಿಷಗಳ ಕಾಲ ಕಾದಿದ್ದ ಆರೋಪಿ!
ಮಾಜಿ ಸಚಿವ ಮತ್ತು ಎನ್ ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಿವ ಕುಮಾರ್ ಗೌತಮ್, ಗುಂಡಿನ ದಾಳಿಯ ನಂತರ ಸಿದ್ದೀಕಿ ಸಾವನ್ನಪ್ಪಿದ್ದಾರೆಯೇ ಅಥವಾ ದಾಳಿಯಿಂದ ಬದುಕುಳಿದಿದ್ದಾರೆಯೇ ಎಂದು ಕಂಡುಹಿಡಿಯಲು ತಾನು ಲೀಲಾವತಿ ಆಸ್ಪತ್ರೆಯ ಹೊರಗೆ ನಿಂತಿದ್ದೆ ಎಂದು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯ ನಂತರ ತಕ್ಷಣವೇ ತನ್ನ ಅಂಗಿಯನ್ನು ಬದಲಾಯಿಸಿಕೊಂಡ ಶೂಟರ್, ತಾನು ಆಸ್ಪತ್ರೆಯ ಹೊರಗೆ ಜನಸಮೂಹದ ನಡುವೆ 30 ನಿಮಿಷಗಳ ಕಾಲ ನಿಂತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸಿದ್ದಿಕ್ ಅವರ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ತಿಳಿದ ತಕ್ಷಣ ಅವರು ಹೊರಟುಹೋಗಿದ್ದಾನೆ.
66 ವರ್ಷದ ಸಿದ್ದೀಕಿ ಅವರನ್ನು ಮುಂಬೈನ ಬಾಂದ್ರಾದಲ್ಲಿ ಅಕ್ಟೋಬರ್ 12 ರಂದು ರಾತ್ರಿ 9:11 ಕ್ಕೆ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಎದೆಯ ಮೇಲೆ ಎರಡು ಗುಂಡುಗಳ ಗಾಯಗಳಾಗಿದ್ದು, ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆವಾಗಲೇ ಅವರು ಸಾವನ್ನಪ್ಪಿದರು.
ಆರೋಪಿಗಳ ಪ್ರಕಾರ ಪ್ರಾಥಮಿಕ ಯೋಜನೆಯ ಪ್ರಕಾರ, ಆತ ತನ್ನ ಸಹಾಯಕರಾದ ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್ ಅವರನ್ನು ಉಜ್ಜಯಿನಿ ರೈಲ್ವೆ ನಿಲ್ದಾಣದಲ್ಲಿ ಭೇಟಿಯಾಗಬೇಕಿತ್ತುಮ್ ಅಲ್ಲಿ ಬಿಷ್ಣೋಯಿ ತಂಡದ ಸದಸ್ಯರೊಬ್ಬರು ಅವರನ್ನು ವೈಷ್ಣೋ ದೇವಿಗೆ ಕರೆದೊಯ್ಯಬೇಕಿತ್ತು.
ಆದರೆ, ಕಶ್ಯಪ್ ಮತ್ತು ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದರಿಂದ ಈ ಯೋಜನೆ ವಿಫಲವಾಯಿತು.
ಮೊಬೈಲ್ ಗಳಲ್ಲಿ ತಡರಾತ್ರಿ ಸಂಭಾಷಣೆಗಳನ್ನು ಮಾಡಿದ ಮುಖ್ಯ ಆರೋಪಿಯ ನಾಲ್ವರು ಸ್ನೇಹಿತರು, ಭಾನುವಾರ ಬಂಧಿಸಲ್ಪಟ್ಟ ಗೌತಮ್ ನನ್ನು ಪತ್ತೆಹಚ್ಚಲು ಮುಂಬೈ ಪೊಲೀಸರಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj