ಪತ್ನಿಯನ್ನು ಪ್ರಿಯಕರನ ಜೊತೆ ವಿವಾಹ ಮಾಡಿಸಿದಾತ, ಮೂರೇ ದಿನಕ್ಕೆ ವಾಪಸ್ ಕರೆದುಕೊಂಡು ಬಂದ!

ಉತ್ತರಪ್ರದೇಶ: ತನ್ನ ಪತ್ನಿಯನ್ನು ಪ್ರಿಯಕರನ ಜೊತೆಗೆ ವಿವಾಹ ಮಾಡಿಕೊಟ್ಟು ಮಹಾತ್ಯಾಗಿಯಂತೆ ಪೋಸ್ ಕೊಟ್ಟಿದ್ದ ವ್ಯಕ್ತಿಯೊಬ್ಬ ಇದೀಗ ಮದುವೆ ಮಾಡಿಕೊಟ್ಟ ಮೂರೇ ದಿನಕ್ಕೆ ತನ್ನ ಪತ್ನಿಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದಾನೆ.
ತನ್ನ ಪತ್ನಿ ರಾಧಿಕಾ, ವಿಕಾಸ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದ ಬಬ್ಲೂ ಎಂಬಾತ, ಆಕೆಯನ್ನು ಬಲವಂತವಾಗಿ ವಿಕಾಸ್ ಜೊತೆಗೆ ವಿವಾಹ ಮಾಡಿಸಿ ಸೇಡು ತೀರಿಸಿಕೊಂಡಿದ್ದ. ಈ ಸುದ್ದಿ ಭಾರೀ ವೈರಲ್ ಆಗಿತ್ತು. ಪತಿ ಮಹಾನ್ ತ್ಯಾಗಿ ಎಂಬಂತೆ ಬಿಂಬಿತವಾಗಿತ್ತು. ಆದ್ರೆ ಈ ಘಟನೆ ನಡೆದು ಮೂರೇ ದಿನಕ್ಕೆ ಪತಿ ಬಬ್ಲೂ ಉಲ್ಟಾ ಹೊಡೆದಿದ್ದಾನೆ.
ಮಾರ್ಚ್ 25ರಂದು ದೇವಾಲಯದಲ್ಲಿ ವಿಕಾಸ್ ಜೊತೆಗೆ ರಾಧಿಕಾ ವಿವಾಹವನ್ನು ನೆರವೇರಿಸಿದ್ದ ಬಬ್ಲೂ ಮಾರ್ಚ್ 28ರಂದು ಮತ್ತೆ ತನ್ನ ಪತ್ನಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾನೆ. ಇದೀಗ ತನ್ನ ಪತ್ನಿ ನಿಷ್ಕಳಂಕಳು ಎಂದು ನನಗೆ ತಿಳಿಯಿತು. ಹಾಗಾಗಿ ವಾಪಸ್ ಕರೆದುಕೊಂಡು ಬಂದಿರುವುದಾಗಿ ಬಬ್ಲೂ ಹೇಳಿಕೊಂಡಿದ್ದಾನೆ.
ಪತ್ನಿಯ ಭಾವನೆಗಳ ಜೊತೆಗೆ ಬಬ್ಲೂ ಆಟವಾಡ್ತಾ ಇದ್ದಾನಾ? ತನಗೆ ಅನುಮಾನ ಬಂದ್ರೆ ಕಂಡವರ ಜೊತೆಗೆ ವಿವಾಹ ಮಾಡಿಕೊಡುವುದು, ನಂತರ ಆಕೆ ಪವಿತ್ರಳು ಎಂದು ಕರೆದುಕೊಂಡು ಬರುವುದು. ಮದುವೆ ಅಂದ್ರೆ ತಮಾಷೆಯ ವಸ್ತುವೇ ಅಂತ ನೆಟ್ಟಿಗರು ಬಬ್ಲೂನನ್ನು ತರಾಟೆಗೆತ್ತಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: