ವಿಶ್ವದ ಗಮನ ಸೆಳೆದ ಅತೀ ಉದ್ದ ಕಿವಿಯ ಮೇಕೆಮರಿ!
ವಿಶ್ವದಲ್ಲೇ ಅತೀ ಉದ್ದದ ಕಿವಿಯ ಮೇಕೆ ಮರಿಯೊಂದು ಇದೀಗ ವಿಶ್ವದ ಗಮನ ಸೆಳೆದಿದ್ದು, ಇದರ ಕಿವಿ 46 ಸೆಂ.ಮೀ. ಉದ್ದವಾಗಿದ್ದು, ಉದ್ದದ ಕಿವಿಹೊಂದಿರುವ ಮೇಕೆ ಎಂದು ವಿಶ್ವ ದಾಖಲೆ ಬರೆಯಲು ಮುಂದಾಗಿದೆ.
ಪಾಕಿಸ್ತಾನದ ಕರಾಚಿಯಲ್ಲಿರುವ ಈ ಮೇಕೆ ಮರಿ ಜೂನ್ 5ರಂದು ಜನಿಸಿದ್ದು, ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬಿಟ್ಟಿದೆ. ಈ ಮೇಕೆ ಸಾಮಾಜಿಕ ಜಾಲತಾಣಗಳಲ್ಲಿ ‘ಸಿಂಬಾ’ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಿದೆ. ಇದೀಗ ಮೇಕೆಯ ಮಾಲೀಕ ‘ಹಸನ್ ನಜೇರೋ ಈ ಮೇಕೆಯಿಂದ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ.
ಈ ಮೇಕೆ ಮರಿಯು “ನುಬಿಯನ್” ಜಾತಿಗೆ ಸೇರಿದ್ದಾಗಿದೆ. ಇದರ ಉದ್ದವಾದ ಕಿವಿ ಎರಡೂ ಬದಿಯಲ್ಲಿ ನೇತು ಹಾಕಿಕೊಂಡಿರುವುದನ್ನು ನೋಡುವುದೇ ಚೆಂದ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಂಗನವಾಡಿ ಕಾರ್ಯಕರ್ತೆ ಸಹಿತ ಐವರ ಮಕ್ಕಳ ಮೇಲೆ ಬಿದ್ದ ಗಂಜಿ ನೀರು
ನಟ ದಿಗಂತ್ ಕುತ್ತಿಗೆಗೆ ಗಂಭೀರ ಏಟು: ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್
ಪ್ರಾಂಶುಪಾಲರನ್ನು ಕರೆದು ಕಪಾಳಕ್ಕೆ ಬಾರಿಸಿದ ಜೆಡಿಎಸ್ ಶಾಸಕ!: ಅನಾಗರಿಕ ವರ್ತನೆ ಕಂಡು ಅಧಿಕಾರಿಗಳು ಶಾಕ್
ಯೋಗ ವ್ಯಕ್ತಿಗಾಗಿ ಮಾತ್ರವಲ್ಲ, ವಿಶ್ವಶಾಂತಿಗಾಗಿ: ಮೈಸೂರಿನಲ್ಲಿ ಪ್ರಧಾನಿ ಮೋದಿ ಮಾತುಗಳು
ಶಾಸಕ ರಾಮ್ ದಾಸ್ ಬೆನ್ನಿಗೆ ಗುದ್ದುವಷ್ಟು ಪ್ರೀತಿ ಮೋದಿಜಿಗೆ ಯಾಕೆ?: ರಾಮ್ ದಾಸ್ ಏನು ಹೇಳಿದ್ರು?