ಹೊಟೇಲ್ ಬಳಿ ನಿಂತಿದ್ದ ಯುವತಿಗೆ ಬ್ಯಾಡ್ ಟಚ್: ಕಾಮುಕನ ವಿಕೃತಿ ಸಿಸಿ ಕ್ಯಾಮರಾದಲ್ಲಿ ಸೆರೆ

18/01/2024
ಬೆಂಗಳೂರು: ಹೊಟೇಲ್ ಬಳಿ ನಿಂತಿದ್ದ ಯುವತಿಯೋರ್ವಳನ್ನು ಟಚ್ ಮಾಡಿ ಕಾಮುಕನೋರ್ವ ಲೈಂಗಿಕ ಕಿರುಕುಳ ನೀಡಿರುವ ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಜಯನಗರದ ನಮ್ಮೂಟ ಹೊಟೇಲ್ ಬಳಿ ಈ ಘಟನೆ ನಡೆದಿದೆ. ಘಟನೆ ಆಕಸ್ಮಿಕ ಎಂಬಂತೆ ಬಿಂಬಿಸಿ, ಉದ್ದೇಶಪೂರ್ವಕವಾಗಿಯೇ ಯುವತಿಯನ್ನು ಯುವಕ ಸ್ಪರ್ಶಿಸುತ್ತಿರುವುದು ಬೆಳಕಿಗೆ ಬಂದಿದೆ.
ಒಟ್ಟು ಮೂವರು ಯುವಕರು ಸೇರಿ ಈ ಕೃತ್ಯ ನಡೆಸಿದ್ದಾರೆ. ಟೀಮ್ ನಲ್ಲಿದ್ದ ಒಬ್ಬ ಉದ್ದೇಶಪೂರ್ವಕವಾಗಿ ಯುವತಿಯನ್ನು ಟಚ್ ಮಾಡುತ್ತಾನೆ. ಈ ವೇಳೆ ಮತ್ತಿಬ್ಬರು ಆತನನ್ನು ದೂರದಲ್ಲಿ ನಿಂತು ನೋಡುತ್ತಿರುತ್ತಾರೆ. ಯುವತಿಯನ್ನು ಬೇಕುಂತಲೇ ಟಚ್ ಮಾಡಿ, ವಿಕೃತಿ ಮೆರೆದಿದ್ದು, ಬಳಿಕ ಯುವತಿಯ ಜೊತೆ ಗಲಾಟೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.