ಬಡ ಹೆಣ್ಣು ಮಗಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಕೊಲೆ: ಮೌನಕ್ಕೆ ಶರಣಾದ ಮಂಗಳೂರಿನ ಸಂಘಟನೆಗಳು - Mahanayaka
1:22 AM Wednesday 11 - December 2024

ಬಡ ಹೆಣ್ಣು ಮಗಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಕೊಲೆ: ಮೌನಕ್ಕೆ ಶರಣಾದ ಮಂಗಳೂರಿನ ಸಂಘಟನೆಗಳು

mangalore
24/11/2021

ಮಂಗಳೂರು: ನಮ್ಮ ಧರ್ಮದ ಹುಡುಗಿಯರನ್ನು ಮುಟ್ಟಿದ್ರೆ, ತಲ್ವಾರ್ ಎತ್ತುತ್ತೇವೆ ಎಂದೆಲ್ಲ ಹೇಳಿಕೆ ಕೊಡುವ ಕರಾವಳಿಯ ಕೆಲವು ಸಂಘಟನೆಗಳು, ಮಂಗಳೂರಿನಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದ ಪೈಶಾಚಿಕ ಕೃತ್ಯದ ವಿರುದ್ಧ ಮಾತನಾಡಲು ಕೂಡ ಹಿಂದೆ ಮುಂದೆ ನೋಡುತ್ತಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಣ್ಣು ಮಕ್ಕಳು ಹಾಗಿರ ಬೇಕು, ಹೀಗಿರಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಉದ್ದುದ್ದ ಲೇಖನ ಬರೆಯುತ್ತಾ, ಉಪನ್ಯಾಸ ನೀಡುತ್ತಾ, ಹುಡುಗರು ಹುಡುಗಿಯರು ಮಾಲ್ ನಲ್ಲಿ ಹಾಗಿದ್ದರು, ಹೀಗಿದ್ದರು ಎಂದು ವಿಡಿಯೋ ಹರಿಯಬಿಡುವ ವೀರರೆಲ್ಲ,  ಮಂಗಳೂರಿನ ಪುಟ್ಟ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯದ ವಿರುದ್ಧ ಮಾತನಾಡಲು ಹಿಂದೇಟು ಹಾಕುತ್ತಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನವೆಂಬರ್ 21ರಂದು ಸಂಜೆ ಮಂಗಳೂರಿನ ಉಳಾಯಿಬೆಟ್ಟು ಪರಾರಿ ಎಂಬಲ್ಲಿ 8 ವರ್ಷದ ಬಾಲಕಿಯನ್ನು ಪೈಶಾಚಿಕ ಕೃತ್ಯ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಕರಾವಳಿಯ ರಾಜಕೀಯ ನಾಯಕರು, ಧಾರ್ಮಿಕ ನಾಯಕರು, ಘಟಾನುಘಟಿ ರಕ್ಷಣಾ ವೇದಿಕೆಗಳು, ಪ್ರಗತಿಪರರು, ಹಿಂದೂ ಸಂಘಟನೆಗಳು, ಮುಸ್ಲಿಮ್ ಸಂಘಟನೆಗಳು, ದಲಿತ ಸಂಘಟನೆಗಳು ಮೌನಕ್ಕೆ ಜಾರಿರುವುದು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.

ಸಣ್ಣಪುಟ್ಟ ಘಟನೆಗಳು ನಡೆದಾಗಲೂ ಬೀದಿಗಿಳಿದು ದೊಡ್ಡ ಪ್ರತಿಭಟನೆ ನಡೆಯುವ ಮಂಗಳೂರಿನಲ್ಲಿ, ಒಂದು ಬಡ ಕುಟುಂಬದ ಹೆಣ್ಣು ಮಗಳ ಮಾನ, ಪ್ರಾಣಕ್ಕೆ ಭದ್ರತೆ ಇಲ್ಲದೆ ಹೋಯಿತು. ಒಂದು ಘೋರ ಘಟನೆ ನಡೆದರೂ, ಯಾವುದೋ ಕೂಲಿ ಕಾರ್ಮಿಕರ ಮಕ್ಕಳು ನಾವ್ಯಾಕೆ ಧ್ವನಿಯೆತ್ತಬೇಕು ಎನ್ನುವಂತಹ ಸಂಘಟನೆಗಳ ನಡೆ, ಇದೀಗ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೊಲೀಸ್ ಠಾಣೆಯಿಂದ ಮನೆಗೆ ಬಂದ ಯುವತಿ ಆತ್ಮಹತ್ಯೆಗೆ ಶರಣು | ಪೊಲೀಸ್ ಠಾಣೆಯಲ್ಲಿ ನಡೆದದ್ದೇನು?

ಕರ್ನಾಟಕದಾದ್ಯಂತ ದೊರೆತ ಭಾರೀ ಬೆಂಬಲಕ್ಕೆ ಮನತುಂಬಿ ಪತ್ರ ಬರೆದ ನಾದ ಬ್ರಹ್ಮ ಹಂಸಲೇಖ

ದುನಿಯಾ ವಿಜಯ್ ಮದುವೆಗೆ ಬಾರದಿದ್ದರೆ, ತಾಳಿಕಟ್ಟಿಸಿಕೊಳ್ಳುವುದಿಲ್ಲ: ಹಠ ಹಿಡಿದ ಯುವತಿ!

ತಂದೆ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಮಗನ ಮೇಲೆಯೇ ಹತ್ತಿದ ಕಾರು!

ಮಂಗಳೂರು: 8 ವರ್ಷದ ಬಾಲಕಿಯ ಹತ್ಯೆ ಪ್ರಕರಣ | 20 ಮಂದಿ ಪೊಲೀಸ್ ವಶಕ್ಕೆ

ಸ್ಕೂಲ್ ಬಸ್ ತಪ್ಪಿ ಹೋಯಿತು ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ!

ಇತ್ತೀಚಿನ ಸುದ್ದಿ