ಬೈಕ್, ಫ್ರಿಡ್ಜ್, ಟಿವಿ ಇದ್ದವರಿಗೆ ಪಡಿತರ ಚೀಟಿ ರದ್ದು, ದಂಡ | ಬಡ ಜನತೆಗೆ ರಾಜ್ಯ ಸರ್ಕಾರದಿಂದ ಬರೆ - Mahanayaka
3:18 PM Friday 20 - September 2024

ಬೈಕ್, ಫ್ರಿಡ್ಜ್, ಟಿವಿ ಇದ್ದವರಿಗೆ ಪಡಿತರ ಚೀಟಿ ರದ್ದು, ದಂಡ | ಬಡ ಜನತೆಗೆ ರಾಜ್ಯ ಸರ್ಕಾರದಿಂದ ಬರೆ

15/02/2021

ಬೆಳಗಾವಿ: ಮನೆಯಲ್ಲಿ ಬೈಕ್, ಫ್ರಿಡ್ಜ್, ಟಿವಿ ಇದ್ದರೆ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದು, 5 ಎಕರೆ ಜಮೀನು ಇರುವವರಿಗೂ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ ಅವರು, 5 ಎಕರೆ ಜಮೀನು, ಬೈಕ್, ಫ್ರಿಡ್ಜ್, ಟಿವಿ ಇವುಗಳಲ್ಲಿ ಯಾವುದಾದರೂ ಒಂದು ಇದ್ದರೂ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುವುದು. ಇಂತಹವರಿಗೆ ಬಿಪಿಎಲ್ ಕಾರ್ಡ್ ಹಿಂದುರಗಿಸಲು ಮಾರ್ಚ್ ಅಂತ್ಯದೊಳಗೆ ಸಮಯ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಪ್ರಿಲ್ ಬಳಿಕ ಸರ್ಕಾರದ ಕಾರ್ಡ್ ಹೊಂದಿರುವವರ ಪರಿಶೀಲನೆ ನಡೆಸಲಾಗುತ್ತದೆ ಒಂದು ವೇಳೆ ಎಲ್ಲ ಸೌಲಭ್ಯಗಳನ್ನು ಹೊಂದಿದ್ದರೆ, ಅವರಿಗೆ ದಂಡದ ಜೊತೆಗೆ ಶಿಕ್ಷೆಯೂ ನೀಡಲಾಗುತ್ತದೆ ಎಂದು ಬಡ ಜನತೆಗೆ ಉಮೇಶ್ ಕತ್ತಿ ಎಚ್ಚರಿಕೆ ನೀಡಿದ್ದಾರೆ.


Provided by

ಬೈಕ್, ಫ್ರಿಡ್ಜ್, ಟಿವಿ, , 5 ಎಕರೆ ಜಮೀನು ಇದ್ದವರೆಲ್ಲ ಶ್ರೀಮಂತರು ಎಂದು ಸರ್ಕಾರ ಯಾವ ಆಧಾರದಲ್ಲಿ  ಹೇಳುತ್ತದೆ. ಬಡವರು ಇಂತಹವುಗಳನ್ನೆಲ್ಲ ಹೊಂದಿರ ಬಾರದೇ?  ಸಾಲ ಪಡೆದುಕೊಂಡು ಕೂಡ ಇಂತಹ ಸಾಮಗ್ರಿಗಳನ್ನು ಅವರು ಖರೀದಿಸಿರಬಹುದು. ಇಂತಹ ಸೂಕ್ಷ್ಮತೆಗಳನ್ನು ಯೋಚಿಸದ ಸರ್ಕಾರ, ಸಿನಿಮಾದ ಕಥೆ ನೋಡಿ ಕಾರ್ಡ್ ರದ್ದು, ಬೈಕ್, ಫ್ರಿಡ್ಜ್, ಟಿವಿ, , 5 ಎಕರೆ ಜಮೀನು ಇದ್ದವರಿಗೆ ದಂಡ ಹಾಕಲು ಹೊರಟಿದೆ. ಇದೊಂದು ಸರ್ಕಾರ, ಇದರದೊಂದು ರೂಲ್ಸ್ ಇದಕ್ಕಿಂತ ಈ ಹಿಂದಿನ ಸರ್ಕಾರಗಳೇ ಬೆಟರ್ ಇತ್ತು. ಹಿಂದಿನ ಸರ್ಕಾರ ಕೊಡುತ್ತಿತ್ತು. ಈಗಿನ ಸರ್ಕಾರ ಕಿತ್ತುಕೊಳ್ಳುತ್ತಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ