ಭಾರತದ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು | ಓವೈಸಿ ಕಿಡಿ
ಹೈದರಾಬಾದ್: ಕೇಂದ್ರ ಸರ್ಕಾರವು ತಾಲಿಬಾನ್ ನ್ನು ಉಗ್ರ ಸಂಘಟನೆ ಎಂದು ಗುರುತಿಸಬೇಕು. ಇಲ್ಲವೇ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಾಲಿಬಾನ್ ಬಗ್ಗೆ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸರ್ಕಾರವು ತಾಲಿಬಾನ್ ಉಗ್ರ ಸಂಘಟನೆಯೋ? ಅಲ್ಲವೋ? ಎನ್ನುವುದನ್ನು ದೇಶಕ್ಕೆ ಹೇಳಬೇಕು. ಒಂದು ವೇಳೆ ತಾಲಿಬಾನ್ ಒಂದು ಉಗ್ರ ಸಂಘಟನೆ ಎಂದು ಸರ್ಕಾರ ಹೇಳಿದರೆ, ತಾಲಿಮಾನ್ ಮತ್ತು ಹಕ್ಕಾನಿ ಜಾಲವನ್ನು ಅಕ್ರಮ ಚಟುವಟಿಕೆ(ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಪಟ್ಟಿಗೆ ಸೇರಿಸಲಾಗುತ್ತದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು. ಮೋದಿ ಸರ್ಕಾರ ತಾಲಿಬಾನ್ ಅನ್ನು ಉಗ್ರ ಸಂಘಟನೆಯಲ್ಲ ಎಂದು ಭಾವಿಸುವುದಾದರೆ, ಬಿಜೆಪಿ ಮತ್ತು ಅವರ ನಾಯಕರು ಎಲ್ಲರನ್ನೂ ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಇದು ಪ್ರತಿ ದಿನವೂ ನಡೆಯುತ್ತಿದೆ. ಒಬ್ಬ ಬಡ ಮುಸ್ಲಿಂ ವ್ಯಕ್ತಿ ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದರೆ, ಅವನನ್ನು ತಾಲಿಬಾನಿ ಎನ್ನಲಾಗುತ್ತದೆ. ಯಾರಾದರೂ ರಾಜಕೀಯವಾಗಿ ಬಿಜೆಪಿಯನ್ನು ವಿರೋಧಿಸಿದರೆ, ಧರ್ಮವನ್ನು ಬದಿಗಿಟ್ಟು ತಾಲಿಬಾನಿ ಮನಸ್ಥಿತಿಯವರು ಎನ್ನಲಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಷ್ಟು ಸುದ್ದಿಗಳು…
ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಯನ್ನು ಸಂಪರ್ಕಿಸುವ ರಹಸ್ಯ ಸುರಂಗಮಾರ್ಗ ಪತ್ತೆ
ರಾತ್ರಿ 3 ಗಂಟೆಗೆ ಎದ್ದು ಎದೆಯನ್ನು ಒತ್ತಿ ಹಿಡಿದಂತಾಗುತ್ತಿದೆ ಎಂದು ಅಮ್ಮನಿಗೆ ಹೇಳಿದ್ದ ಸಿದ್ಧಾರ್ಥ್ ಶುಕ್ಲಾ
ಆತ್ಮಹತ್ಯೆ ಮಾಡಲು ನೀರಿಗೆ ಹಾರಿದ ಕುಡುಕನ ರಕ್ಷಣೆಗೆ ಹೋದ ಇಬ್ಬರು ಸಾವು | ಕುಡುಕ ಸೇಫ್!
ನೀರಿನ ಬಾಟಲಿಯೇ ಬೆಂಗಳೂರಿನ ಅಪಘಾತಕ್ಕೆ ಕಾರಣವಾಯ್ತೆ? | ಅಪಘಾತದ ವೇಳೆ ನಡೆದದ್ದೇನು?
ಕೈಕೊಟ್ಟ ಕೇಂದ್ರ ಸರ್ಕಾರ: ಈ ಪ್ರಮುಖ 10 ಯೋಜನೆಗಳಿಗೆ ಬಿಡಿಗಾಸೂ ಬಿಡುಗಡೆಯಾಗಿಲ್ಲ!
ಅಪಘಾತದಲ್ಲಿ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವು | ಅಪಘಾತಕ್ಕೂ ಮೊದಲು ಎಚ್ಚರಿಕೆ ನೀಡಿದ್ದ ಪೊಲೀಸರು
ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ | ನಟಿ ರಮ್ಯಾ ಪ್ರಶ್ನೆ