ಬದಾಮ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉತ್ತಮ
ಬದಾಮ್ ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಬೆಳವಣಿಗೆಗೆ ಒಳ್ಳೆಯದು ಎಂದು ಚಿಕ್ಕ ವಯಸ್ಸಿನಿಂದಲೂ ಪ್ರತಿಯೊಬ್ಬರೂ ಕೇಳಿರುತ್ತಾರೆ. ಆದರೆ ಬದಾಮ್ ಚರ್ಮ ಮತ್ತು ಕೂದಲಿನ ಮೇಲೆ ಅದ್ಭುತಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಮಾತ್ರ ಅನೇಕರಿಗೆ ತಿಳಿದಿಲ್ಲ. ಬದಾಮಿಯ ಪ್ರಯೋಜನಗಳನ್ನು ನೋಡುದಾದರೆ…
ಚರ್ಮದ ವಯಸ್ಸಾಗುವುದನ್ನು ತಡೆಯುತ್ತದೆ:
ಬದಾಮಿನಲ್ಲಿ ವಿಟಮಿನ್ ಇ ಯು.ಧಾರಳವಾಗಿದೆ.ಬದಾಮ್ ನ್ನು ನಿಯಮಿತವಾಗಿ ತಿನ್ನುವುದು ಅಥವಾ ಮುಖಕ್ಕೆ ಉಜ್ಜುವುದು ಚರ್ಮವನ್ನು ಮೃದುವಾಗಿಸಲು ಮತ್ತು ಯೌವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಳವಾಗಿ ಮೊಯ್ಸ್ ಚರಸ್ ಮಾಡುವುದರಿಂದ ಒಣ ಚರ್ಮ ಮತ್ತು ಚರ್ಮದ ಮೇಲಿನ ಗೆರೆಯನ್ನು ಕಡಿಮೆ ಮಾಡುತ್ತದೆ. ಚರ್ಮದ ಮೇಲೆ ಬೀಳುವ ಹಾನಿಕಾರಕ ಯುವಿ ಕಿರಣಗಳ ಪ್ರಭಾವವನ್ನು ಕಡಿಮೆ ಮಾಡಲು ಬದಾಮ್ ಸಹಾಯ ಮಾಡುತ್ತದೆ.
ಚರ್ಮಕ್ಕೆ ಹೊಳಪು ನೀಡುತ್ತದೆ:
ಬಾದಾಮಿಯನ್ನು ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ ಏಕೆಂದರೆ ಇದರಲ್ಲಿ ವಿಟಮಿನ್ ಇ ಜೊತೆಗೆ ಅನೇಕ ಫ್ರೀ ರ್ಯಾಡಿಕಲ್ ಗಳಿವೆ.
ಮೊಡವೆಗಳನ್ನು ಕಡಿಮೆ ಮಾಡುತ್ತದೆ:
ಬದಾಮ್ ತಿನ್ನುವುದರಿಂದ ಮೊಡವೆಗಳು ಕಡಿಮೆ ಮಾಡಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಬದಾಮನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿದ ನಂತರ ಅದನ್ನು ಹಿಸುಕಿ ಮೊಡವೆ ಇರುವ ಜಾಗಕ್ಕೆ ಹಚ್ಚಿದರೆ ಮೊಡವೆ ಮತ್ತು ಕಪ್ಪು ಕಲೆಗಳು ಹೋಗುತ್ತವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಟ್ಯೂಮೋಕ್ ಆ್ಯಪ್ ಮೂಲಕ ಜೂನ್ ತಿಂಗಳ ಬಿಎಂಟಿಸಿ ಮಾಸಿಕ ಪಾಸ್ ಬುಕ್ ಮಾಡಿ
ದೇಶದಲ್ಲಿ ನಡೆಯುತ್ತಿರುವ ಕೋಮುಪ್ರೇರಿತ ಗಲಭೆ, ಗಲಾಟೆಗೆ ಆರೆಸ್ಸೆಸ್ ಕಾರಣ: ಶಾಸಕ ಅಮರೇಗೌಡ ಬಯ್ಯಾಪುರ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನಿರ್ಮಾಪಕ ಭಾ.ಮಾ.ಹರೀಶ್ ಆಯ್ಕೆ
ನಾಲ್ವರು ಭಾರತೀಯರ ಸಹಿತ 22 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನ ನಾಪತ್ತೆ!