ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗ ಏಕೆ? ಮಂತ್ರಿಗಳಿಗೆ ಮೊದಲು ಹಾಕಿ | ಯು.ಟಿ.ಖಾದರ್ ಟೀಕೆ
ಮಂಗಳೂರು: ಡಿ ಗ್ರೂಪ್ ನೌಕರರ ಮೇಲೆ ಮೊದಲು ಕೊರೊನಾ ಲಸಿಕೆಯನ್ನು ಪ್ರಯೋಗ ಮಾಡಿರುವುದನ್ನು ಮಾಜಿ ಸಚಿವ ಯು.ಟಿ.ಖಾದರ್ ವಿರೋಧಿಸಿದ್ದು, ಮೊದಲು ಮಂತ್ರಿಗಳು ಶಾಸಕರು ಕೊರೊನಾ ಲಸಿಕೆಯನ್ನು ಹಾಕಿಕೊಳ್ಳಲಿ ಎಂದು ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಲಸಿಕೆ ಬಂದಿರುವುದು ಸಂತೋಷ.ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಲಸಿಕೆಗೆ ಪ್ರಯೋಗ ಮಾಡುವ ಮೊದಲು ಆಡಂಬರದಿಂದ ಉದ್ಘಾಟನೆ ಮಾಡುವ ಮಂತ್ರಿಗಳು ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಲಸಿಕೆ ಪಡೆದು ಮಾದರಿ ಆಗಲಿ ಎಂಬುದು ಜನರ ಪರವಾಗಿ ನನ್ನ ವಿನಂತಿ ಎಂದು ಹೇಳಿದ್ದಾರೆ.
ಎಲ್ಲ ಕಾರ್ಯಕ್ರಮಗಳಲ್ಲಿ ಮಂತ್ರಿಗಳು ಮುಂದೆ ನಿಂತು ಉದ್ಘಾಟನೆ ಮಾಡುತ್ತಿದ್ದಾರೆ. ಆದರೆ ಕೊವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಮಾತ್ರ, ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಜೀವಕ್ಕೆ ಹೆದರಿ ಮಂತ್ರಿಗಳು ಶಾಸಕರು, ಹಿಂದೆ ನಿಂತಿದ್ದರು. ಮಂತ್ರಿಗಳೇ ಕೊವಿಡ್ ಲಸಿಕೆ ಹಾಕಿಕೊಂಡು ಜನರಿಗೆ ಧೈರ್ಯ ತುಂಬಬೇಕಿತ್ತು. ಆದರೆ, ಮಂತ್ರಿಗಳು ದೂರ ನಿಂತು ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಯು.ಟಿ.ಖಾದರ್ ಸರ್ಕಾರದ ನಡೆಯನ್ನು ವಿರೋಧಿಸಿದ್ದಾರೆ.
ಲಸಿಕೆ ಬಂದಿರುವುದು ಸಂತೋಷ.ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಲಸಿಕೆಗೆ ಪ್ರಯೋಗ ಮಾಡುವ ಮೊದಲು ಆಡಂಬರದಿಂದ ಉದ್ಘಾಟನೆ ಮಾಡುವ ಮಂತ್ರಿಗಳು ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಲಸಿಕೆ ಪಡೆದು ಮಾದರಿ ಆಗಲಿ ಎಂಬುದು ಜನರ ಪರವಾಗಿ ನನ್ನ ವಿನಂತಿ. @BSYBJP @KotasBJP @AngaraSBJP #People's #safety #is #govt #responsibility.
— UT Khader (@utkhader) January 16, 2021