ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್, ಇನ್ನೊಂದು ಸ್ಲೇಟ್ ನಲ್ಲಿ ‘ಬಡವ ರಾಸ್ಕಲ್’ ಡೇಟ್! - Mahanayaka

ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್, ಇನ್ನೊಂದು ಸ್ಲೇಟ್ ನಲ್ಲಿ ‘ಬಡವ ರಾಸ್ಕಲ್’ ಡೇಟ್!

badava rascal
26/11/2021

ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್ ಇನ್ನೊಂದು ಸ್ಲೇಟ್ ನಲ್ಲಿ “ಬಡವ ರಾಸ್ಕಲ್” ಡೇಟ್. ಹೌದು..! ಚಿತ್ರರಂಗದಲ್ಲಿ  ಈವರೆಗೆ ಯಾರೂ ಪ್ರಯೋಗ ಮಾಡದ ಹೊಸ ಪ್ರಯೋಗವನ್ನು ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಚಿತ್ರ ತಂಡ ಮಾಡಿದ್ದು, ಸಾರ್ವಜನಿಕರು ಕೂಡ ಕೆಲ ಕಾಲ ಗೊಂದಲಕ್ಕೀಡಾಗುವಂತೆ ಮಾಡಿದೆ.

ಎಳನೀರು ಮಾರಾಟ ಮಾಡುವ ಅಂಗಡಿಯನ್ನು ಟಾರ್ಗೆಟ್ ಮಾಡಿರುವ ಚಿತ್ರತಂಡ, ಈ ಅಂಗಡಿಗಳಲ್ಲಿರುವ ರೇಟ್ ಬೋರ್ಡ್ ನ ಸಮೀಪದಲ್ಲಿ ಇನ್ನೊಂದು ಸ್ಲೇಟ್ ಇರಿಸಿ, ‘ಡಿಸೆಂಬರ್  24ರಂದು ಬಸವ ರಾಸ್ಕಲ್’ ಎಂದು ಬರೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಜನರು ರಸ್ತೆಯಲ್ಲಿ ಓಡಾಡುತ್ತಿರುವ ವೇಳೆ ಎಳೆನೀರು ಅಂಗಡಿಗೆ ಒಮ್ಮೆ ಇಣುಕಿ ನೋಡದಿರುವುದಿಲ್ಲ. ಅಲ್ಲಿ ನೇತು ಹಾಕಿರುವ ಸ್ಲೇಟ್ ನಲ್ಲಿ ಎಳೆನೀರು ರೇಟ್ ಎಷ್ಟು ಎಂದು ನೋಡೇ ನೋಡುತ್ತಾರೆ. ಹಾಗಾಗಿ ಬಡವ ರಾಸ್ಕಲ್ ಚಿತ್ರ ತಂಡ ಪ್ರಚಾರಕ್ಕಾಗಿ ಬಡವರನ್ನೇ ಆಯ್ಕೆ ಮಾಡಿಕೊಂಡಿದ್ದು, ಬಡ ವ್ಯಾಪಾರಿಗಳ ಎಳೆನೀರು ಅಂಗಡಿಗಳಲ್ಲಿ ಚಿತ್ರ ಬಿಡುಗಡೆಯ ದಿನಾಂಕವನ್ನು ಹಾಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸರ್ಕಾರಿ ಲೈಬ್ರೆರಿಗಳಲ್ಲಿ ಅಂಬೇಡ್ಕರ್ ಪುಸ್ತಕಗಳ ಬಗ್ಗೆ ಯಾಕೆ ಈ ಅಸಡ್ಡೆ?

‘ಜೈಭೀಮ್’ ಸಿನಿಮಾ ಹೋಲುವ ಪ್ರಕರಣ | ತನ್ನ 3 ಮಕ್ಕಳ ಕೊಲೆಗೆ 19 ವರ್ಷಗಳ ಬಳಿಕ ನ್ಯಾಯ ಪಡೆದ ತಂದೆ!

ಬೆಂಗಳೂರಿನಲ್ಲಿ ಎರಡು ಬಾರಿ ಭೂಕಂಪನದ ಅನುಭವ: ಮಂಡ್ಯದಲ್ಲಿ ಕೇಳಿ ಬಂತು ನಿಗೂಢ ಶಬ್ಧ!

ವರದಕ್ಷಿಣೆ ನೀಡಲು ಕೂಡಿಟ್ಟಿದ್ದ 75 ಲಕ್ಷ ರೂ. ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ದಾನ ಮಾಡಿದ ಯುವತಿ!

ತೀವ್ರ ಎದೆ ನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅಣ್ಣಾ ಹಜಾರೆ

“ಓ ಮಾರಿಕೊಂಡ ಮಾಧ್ಯಮಗಳೇ, ಹಂಸಲೇಖ ನೀಡಿದ್ದು ‘ವಿವಾದಾತ್ಮಕ ಹೇಳಿಕೆ’ ಅಲ್ಲ” | ಚಾಟಿ ಬೀಸಿದ ಖ್ಯಾತ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ

ಬ್ರಾಹ್ಮಣರು ಕದ್ದು ಮುಚ್ಚಿ ಮಾಂಸ ಸೇವಿಸುತ್ತಾರೆ ಎಂದಿದ್ದ ಪೇಜಾವರ ಶ್ರೀ ಮೇಲೆ ಯಾಕೆ ಕೇಸು ಹಾಕಲಿಲ್ಲ? | ಹಂಸಲೇಖ ಬೆಂಬಲಿಗರ ಪ್ರಶ್ನೆ

ಇತ್ತೀಚಿನ ಸುದ್ದಿ