ಕ್ಯಾನ್ ಗೆ ಪೆಟ್ರೋಲ್ ತುಂಬಿಸುವ ವೇಳೆ ಹತ್ತಿಕೊಂಡ ಬೆಂಕಿ: ಯುವತಿ ಸಾವು, ಮಹಿಳೆಯ ಸ್ಥಿತಿ ಗಂಭೀರ
ತುಮಕೂರು: ಕ್ಯಾನ್ ಗೆ ಪೆಟ್ರೋಲ್ ತುಂಬಿಸುವಾಗ ಹತ್ತಿಕೊಂಡ ಬೆಂಕಿ, ಚಿಕಿತ್ಸೆ ಫಲಕಾರಿಯಾಗದೆ ಓರ್ವ ಯುವತಿ ಸಾವು, ಮತ್ತೋರ್ವ ಮಹಿಳೆಗೆ ಗಂಭೀರ ಗಾಯವಾಗಿರೋ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ಬೈಕ್ ಗೆ ಬೆಂಕಿ ಹತ್ತಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 18 ವರ್ಷದ ಭವ್ಯ ಮೃತ ದುರ್ದೈವಿಯಾಗಿದ್ದಾರೆ. ರತ್ನಮ್ಮ (46) ಗಂಭೀರವಾಗಿ ಗಾಯಗೊಂಡವರಾಗಿದ್ದರೆ.
ದ್ವಿಚಕ್ರ ವಾಹನದ ಮೇಲೆ ಕ್ಯಾನ್ ಇಟ್ಟು ಪೆಟ್ರೋಲ್ ತುಂಬಿಸುವಾಗ ಅನಾಹುತ ನಡೆದಿದೆ. ಮಗಳು ಭವ್ಯಳೊಂದಿಗೆ ಪೆಟ್ರೋಲ್ ಬಂಕಿಗೆ ಬಂದಿದ್ದ ತಾಯಿ ರತ್ನಮ್ಮ, ಮೃತ ದುರ್ದೈವಿ ಶಿರಾ ತಾಲ್ಲೂಕಿನ ಜವನಹಳ್ಳಿ ನಿವಾಸಿಗಳು.
ಗಾಯಾಳುಗಳನ್ನು ಶಿರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಕಳೆದ ಬುಧವಾರ ನಡೆದ ಘಟನೆಯಾಗಿದೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw